ಹೆಂಡತಿಯನ್ನು ಇಂಪ್ರೆಸ್ ಮಾಡಲು ಮುಂಬೈ ಪೊಲೀಸರ ಪಾಸ್‌ಪೋರ್ಟ್ ಪರಿಶೀಲನಾ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಆತ ಪಾಸ್ ಪೋರ್ಟ್ ಪರಿಶೀಲನೆ ವೇಳೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ತನ್ನ ಪತ್ನಿ ಸೇರಿದಂತೆ ಮೂವರು ಅರ್ಜಿದಾರರ ಪಾಸ್‌ಪೋರ್ಟ್ ವಿಚಾರಣೆಯನ್ನು ತೆರವುಗೊಳಿಸಿದ್ದಾನೆ.
ಆತನನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿದ್ದು, ಆರೋಪಿ ರಾಜಾ ಬಾಬು ಶಾನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ವಿವರಗಳ ಪ್ರಕಾರ ಉದ್ಯೋಗಕ್ಕಾಗಿ ವಿದೇಶಕ್ಕೆ ಪ್ರಯಾಣಿಸಲು ಬಯಸಿದ ತನ್ನ ಹೆಂಡತಿಯನ್ನು ಮೆಚ್ಚಿಸಲು ಆರೋಪಿ ಪಾಸ್ ಪೋರ್ಟ್ ಪರಿಶೀಲನಾ ವ್ಯವಸ್ಥೆಯನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದನು.
ಆರೋಪಿಯ ಪತ್ನಿಯ ದಾಖಲೆಗಳು ಸರಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆಕೆಯ ಪಾಸ್‌ಪೋರ್ಟ್ ಅನ್ನು ಸದ್ಯ ತಡೆಹಿಡಿಯಲಾಗಿದೆ.
ಪೊಲೀಸರು ನೋಯ್ಡಾದಲ್ಲಿರುವ ಸಾಧನದ ಐಪಿ ವಿಳಾಸವನ್ನು (ಪಾಸ್‌ಪೋರ್ಟ್ ಪರಿಶೀಲನಾ ವ್ಯವಸ್ಥೆಯನ್ನು ಪ್ರವೇಶಿಸಲು) ಪತ್ತೆ ಹಚ್ಚಿದ ನಂತರ ಆರೋಪಿಯನ್ನು ಹಿಡಿಯಲಾಯಿತು. ಪಾಸ್‌ಪೋರ್ಟ್ ಶಾಖೆಯನ್ನು ಅಧಿಕೃತವಾಗಿ ಮುಚ್ಚಿರುವ ದಿನದಂದು ಈ ಘಟನೆ ನಡೆದಿದೆ.
ಏತನ್ಮಧ್ಯೆ, ಪೊಲೀಸರು ಆರೋಪಿಯ ವಿರುದ್ಧ ಆಜಾದ್ ಮೈದಾನ ಪೊಲೀಸ್ ಠಾಣೆಯಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.