ಲಿಥುಯೇನಿಯಾದ ವಿಲ್ನಿಯಸ್ ನಗರದಲ್ಲಿ ರಿಯಲ್-ಟೈಮ್ ಪೋರ್ಟಲ್ ಒಂದನ್ನು ಅಳವಡಿಸಲಾಗಿದ್ದು, ಈ ಮೂಲಕ ಜನರು ಪರಸ್ಪರ ಕನೆಕ್ಟ್ ಆಗಿರಲು ವ್ಯವಸ್ಥೆ ಮಾಡಲಾಗಿದೆ.
ವಿಲ್ನಿಯನ್ ರೈಲ್ವೇ ನಿಲ್ದಾಣದ ಬಳಿ ಅಳವಡಿಸಲಾದ ಈ ಪೋರ್ಟಲ್ ಮೂಲಕ ಆ ನಗರದ ಜನರು, 600 ಕಿಮೀ ದೂರದ ಪೋಲೆಂಡ್‌ನ ಲುಬ್ಲಿನ್ ನಗರದ ಮಂದಿಯೊಂದಿಗೆ ಸಂಪರ್ಕದಲ್ಲಿ ಇರಬಲ್ಲರು.
ಮೇ 26ರಂದು ಅಳವಡಿಸಲಾದ ಈ ವೃತ್ತಾಕಾರದ ಡಿವೈಸ್‌ನಲ್ಲಿ ಸ್ಕ್ರೀನ್ ಹಾಗೂ ಕ್ಯಾಮೆರಾಗಳು ಇದ್ದು, ಉಭಯ ನಗರಗಳ ನಡುವೆ ಲೈವ್ ಪ್ರಸಾರವನ್ನು ಪರಸ್ಪರ ಬಿತ್ತರಿಸುತ್ತದೆ. ಈ ಮೂಲಕ ಎರಡೂ ಊರುಗಳ ಜನರನ್ನು ವರ್ಚುವಲ್ ಆಗಿ ಒಗ್ಗೂಡಿಸುವ ಯತ್ನ ಇದಾಗಿದೆ.
ಪ್ರಾರಂಭಿಕ ಹಂತದಲ್ಲಿ ಇರುವ ಈ ವ್ಯವಸ್ಥೆಯನ್ನು ಮುಂಬರುವ ದಿನಗಳಲ್ಲಿ ಯೂರೋಪ್‌ನ ಇತರ ನಗರಗಳು ಹಾಗೂ ಜಗತ್ತಿನೆಲ್ಲೆಡೆ ವ್ಯಾಪಿಸುವ ಆಸೆಯನ್ನು ಗೋ ವಿಲ್ನಿಯನ್ ಸಂಸ್ಥೆ ಇಟ್ಟುಕೊಂಡಿದೆ.