ಪಾಸ್‌ಪೋರ್ಟ್ ನಿಯಮಾವಳಿಗಳನ್ನು ಇನ್ನಷ್ಟು ಸರಳೀಕರಣಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚಿಂತಿಸುತ್ತಿದೆ. ಅಂಚೆ ಇಲಾಖೆಯೊಂದಿಗೆ ಸಹಯೋಗದಲ್ಲಿ ಜನಸಾಮಾನ್ಯರನ್ನು ಇನ್ನಷ್ಟು ಆಳವಾಗಿ ತಲುಪಲು ವಿದೇಶಾಂಗ ಇಲಾಖೆ ಮುಂದಾಗಿದೆ.
ಭಾರತದಲ್ಲಿ ಅದಾಗಲೇ 555 ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿದ್ದು, ಇವುಗಳಲ್ಲಿ 36 ಪಾಸ್‌ಪೋರ್ಟ್ ಕಾರ್ಯಾಲಯಗಳು, 93 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಹಾಗೂ 426 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಾಗಿವೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ತಿಳಿಸಿದ್ದಾರೆ.
ಭಾರತದಲ್ಲಿರುವ ನಾಗರಿಕರು ಹಾಗೂ ವಿದೇಶಗಳಲ್ಲಿರುವ ದೇಶೀಗಳಿಗೆ ಕೇಂದ್ರೀಕೃತ ಪಾಸ್‌ಪೋರ್ಟ್ ವಿತರಣಾ ವ್ಯವಸ್ಥೆ ಮೂಲಕ ಭಾರತದ 174 ವಿದೇಶೀ ಮಿಶನ್‌ಗಳನ್ನು ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮದೊಂದಿಗೆ ಸಮೀಕರಿಸಲಾಗಿದೆ.
ಇದೀಗ ಡಿಜಿಲಾಕರ್ ಮೂಲಕ ಕಾಗದರಹಿತವಾಗಿ ನಾಗರಿಕರು ಪಾಸ್‌ಪೋರ್ಟ್ ಸೇವೆಗಳಿಗೆ ಬೇಕಾದ ದಾಖಲೆಗಳನ್ನು ಒದಗಿಸಬಹುದಾಗಿದೆ. ಅಂದರೆ, ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ವೇಳೆ ನೀವು ನಿಮ್ಮ ದಾಖಲೆಗಳನ್ನು ಕಾಗದದ ರೂಪದಲ್ಲಿ ಕೊಂಡೊಯ್ಯಬೇಕಾದ ಅಗತ್ಯವಿರುವುದಿಲ್ಲ.