alex Certify ತಪ್ಪಾಗಿ ವರ್ಗಾಯಿಸಿದ ಹಣ ಮರಳಿ ಪಡೆಯಲು ಸಿಟಿ ಬ್ಯಾಂಕ್ ಪರದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಪ್ಪಾಗಿ ವರ್ಗಾಯಿಸಿದ ಹಣ ಮರಳಿ ಪಡೆಯಲು ಸಿಟಿ ಬ್ಯಾಂಕ್ ಪರದಾಟ

ರೆವ್ಲಾನ್ ಹೆಸರಿನ ಕಂಪನಿಗೆ 2020ರ ಆಗಸ್ಟ್‌ನಲ್ಲಿ ತಪ್ಪಾಗಿ $500 ದಶಲಕ್ಷವನ್ನು ವರ್ಗಾಯಿಸಿದ್ದ ಸಿಟಿ ಬ್ಯಾಂಕ್‌ ಆ ದುಡ್ಡನ್ನು ಮರಳಿ ಪಡೆಯಲು ಭಾರೀ ಕಷ್ಟಪಡುತ್ತಿದೆ.

ಪ್ರಕರಣದ ಕುರಿತಂತೆ ಸುದೀರ್ಘ ಆಲಿಕೆ ನಡೆಸಿದ ನ್ಯಾಯಾಲಯವೊಂದು, ಈ ಹಣವನ್ನು ಮರಳಿ ಪಡೆಯಲು ಬ್ಯಾಂಕಿಗೆ ಅವಕಾಶವಿಲ್ಲ ಎಂದು ಆದೇಶ ನೀಡಿದೆ. ಬ್ಯಾಂಕಿಂಗ್ ಇತಿಹಾಸದ ಅತಿ ದೊಡ್ಡ ಪ್ರಮಾದ ಇದಾಗಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಆಭರಣ ಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ

ರೆವ್ಲಾನ್‌ನ ಲೋನ್ ಏಜೆಂಟ್ ಆಗಿರುವ ಸಿಟಿ ಬ್ಯಾಂಕ್, ಬಡ್ಡಿಯ ಬದಲಿಗೆ ತಪ್ಪಾಗಿ $900 ದಶಲಕ್ಷದಷ್ಟು ಅಸಲು ಮೊತ್ತವನ್ನು ಕಾಸ್ಮೆಟಿಕ್ ಕಂಪನಿಯ ಖಾತೆಗೆ ವರ್ಗಾವಣೆ ಮಾಡಿತ್ತು. ತಾನು ಮಾಡಿದ ತಪ್ಪನ್ನು ಕೂಡಲೇ ಅರಿತ ಬ್ಯಾಂಕ್‌ ಈ ಮೊತ್ತವನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದು, ಇನ್ನೂ $500 ದಶಲಕ್ಷದಷ್ಟು ವಾಪಸ್ ಪಡೆಯಬೇಕಿದೆ.

ಈ ಸಂಬಂಧ ಆಲಿಕೆ ನಡೆಸಿದ ಅಮೆರಿಕದ ಜಿಲ್ಲಾ ನ್ಯಾಯಾಲಯವೊಂದರ ನ್ಯಾಯಾಧೀಶ ಜೆಸ್ಸೆ ಎಂ ಫರ್ಮನ್‌, ರೆವ್ಲಾನ್‌‌ನ ಸಾಲದ ಭಾಗವಾಗಿ ಅಷ್ಟೂ ಪೇಮೆಂಟ್ ಸ್ವೀಕರಿಸಿರುವುದಾಗಿ ಸ್ವೀಕೃತರು ನಂಬಿರುವ ಕಾರಣ ಈ ಹಣವನ್ನು ಬ್ಯಾಂಕ್ ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ತೀರ್ಪಿತ್ತಿದ್ದಾರೆ. ತೀರ್ಪಿನ ವಿರುದ್ಧ ಸಿಟಿ ಬ್ಯಾಂಕ್ ಮೇಲ್ಮನವಿ ಸಲ್ಲಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...