alex Certify 10,000 ಉದ್ಯೋಗಿಗಳನ್ನು ಸ್ವಂತ ಖರ್ಚಿನಲ್ಲಿ ಡಿಸ್ನಿಲ್ಯಾಂಡ್‌ ಗೆ ಕಳುಹಿಸಿದ ಸಿಇಓ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10,000 ಉದ್ಯೋಗಿಗಳನ್ನು ಸ್ವಂತ ಖರ್ಚಿನಲ್ಲಿ ಡಿಸ್ನಿಲ್ಯಾಂಡ್‌ ಗೆ ಕಳುಹಿಸಿದ ಸಿಇಓ

ವರ್ಷಕ್ಕೊಮ್ಮೆ ಸಿಗುವ ಬೋನಸ್, ಟೈಮ್ ಟೈಮ್ಗೆ ಸಿಗೋ ಬಡ್ತಿ ಇಷ್ಟು ಸಿಕ್ಕರೆ ಯಾವ ಉದ್ಯೋಗಿ ತಾನೆ ನೆಮ್ಮದಿಯಾಗಿ ಕೆಲಸ ಮಾಡೋಲ್ಲ ಹೇಳಿ. ಆದರೆ ಕೆಲ ಕಂಪನಿಗಳ ಬಾಸ್ ಇರ್ತಾರೆ.

ಅವರು ತಮ್ಮ ಕಂಪನಿಗಾಗಿ ಹಗಲು ರಾತ್ರಿ ಅನ್ನದೇ ಕೆಲಸ ಮಾಡುವ ಉದ್ಯೋಗಿಗಳು ಖುಷಿಯಾಗಿರಲಿ ಅಂತ ಮಾಡೋ ಪ್ರಯತ್ನಗಳು ಅಷ್ಟಿಷ್ಟಲ್ಲ. ನಿಮಗೆ ಅಚ್ಚರಿಯಾಗಬಹುದು CITAEL ಅನ್ನೊ ಕಂಪನಿ ಸಿಇಒ ಕೆನ್ ಗರಾಫಿನಿ ಇವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ 10,000 ಉದ್ಯೋಗಿಗಳಿಗಂತಾನೇ ಡಿಸ್ನಿ ವರ್ಲ್ಡ್ ಸುತ್ತಾಡುವ ವ್ಯವಸ್ಥೆ ಮಾಡಿದ್ದಾನೆ. ಅದು ಕೂಡ ಮೂರು ದಿನದ ಪ್ರವಾಸ. ಅದಕ್ಕಂತಾನೇ ಫ್ರೀ ಆಗಿ ಎಲ್ಲರಿಗೂ ಫ್ಲೈಟ್ ಟಿಕೆಟ್ ಕೊಟ್ಟಿದ್ದೂ ಆಗಿದೆ. ಬಾಸ್‌ನಿಂದ ಇಂಥಾ ಒಂದು ಬಂಪರ್ ಗಿಫ್ಟ್ ಸಿಕ್ಕರೆ ಯಾವ ಉದ್ಯೋಗಿ ತಾನೇ ಖುಷ್ ಆಗೋಲ್ಲ ಹೇಳಿ.

ಸಿಇಒ ಗರಾಫಿನಿ ಪ್ರವಾಸದ ಸಮಯದಲ್ಲಿ ಉದ್ಯೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ವಿಶೇಷ ಗಮನವಹಿಸಿದ್ದಾರೆ. ಕೇವಲ ಉದ್ಯೋಗಿಗಳು ಮಾತ್ರ ಅಲ್ಲ ಅವರ ಕುಟುಂಬದವರು ಕೂಡಾ ಈ ಪ್ರವಾಸಕ್ಕೆ ಹೋಗಬಹುದು. ವಿಶೇಷ ಊಟದ ವ್ಯವಸ್ಥೆ, ಹೊಟೇಲ್ ವ್ಯವಸ್ಥೆ ಇದೆಲ್ಲದರ ಗಮನ‌ ವಹಿಸಲಾಗಿದೆ. ಇದೆಲ್ಲದರ ಜೊತೆಗೆ ಉದ್ಯೋಗಿಗಳಿಗಂತಾನೇ, ವಿಶ್ವವಿಖ್ಯಾತ ಸಂಗೀತಗಾರ ಕಾರ್ಲಿ ರಾಯ್ ಜೆಪಸೆನ್ ಮತ್ತು ಡಿಜೆ ಡಪಿಲೋ ಅವರ ಜೊತೆ ಸಂಗೀತ ಸಂಜೆ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಉದ್ಯೋಗಿಗಳಿಗೆ ಇಷ್ಟೆಲ್ಲ ಮಾಡಿರುವ ಕಂಪನಿ ಸಿಇಒ ಕೆನ್ ಗರಾಫಿನಿ, ತಮ್ಮ ಕಂಪನಿ ಉದ್ಯೋಗಿಗಳಿಗೆ ಹೇಳಿದ್ದ ಮಾತು ಒಂದೇ, “ನಾನು ನನ್ನ ಕಂಪನಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಯನ್ನ ತನ್ನ ಕುಟುಂಬದ ಸದಸ್ಯನಂತೆ ನೋಡಿದ್ದೇನೆ. ನನ್ನ ಕಂಪನಿಯಲ್ಲಿರುವ ತಂಡ ಅತ್ಯುತ್ತಮ ಅನ್ನೊದು ನನಗೆ ಅನುಮಾನವೇ ಇಲ್ಲ. ಮುಂದಿನ ದಿನಗಳಲ್ಲಿಯೂ ತನ್ನ ತಂಡ ಉತ್ತಮ ಭವಿಷ್ಯಕ್ಕಾಗಿ ನನಗೆ ಇದೇ ರೀತಿಯಾಗಿ ಬೆಂಬಲಿಸುತ್ತೆ ಅನ್ನೊ ವಿಶ್ವಾಸವನ್ನ ಇಟ್ಟುಕೊಂಡಿದ್ದೇನೆ.“ ಬಾಸ್‌ನ ಈ ಮಾತು ಕೇಳಿ ಉದ್ಯೋಗಿಗಳು ಭಾವುಕರಾಗಿದ್ದಂತೂ ಸತ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...