ಶುಕ್ರವಾರದಂದು ಬಾಕಿ ದಿನಗಳಂತೆಯೇ ಪೂರ್ವ ದೆಹಲಿಯ ಮಯೂರ್ ವಿಹಾರ್ ಎಕ್ಸ್‌ಟೆನ್ಷನ್ ಮೆಟ್ರೋ ನಿಲ್ದಾಣವಿತ್ತು. ಆದರೆ ಏಕಾಏಕಿಯಾಗಿ 70 ವರ್ಷದ ಮಹಿಳೆಯೊಬ್ಬರು ಬೆಳಗ್ಗೆ 8.45ಕ್ಕೆ ಮೆಟ್ರೋ ರೈಲಿನ ಎದುರು ಹಾರಿ ಆತ್ಮಹತ್ಯೆಗೆ ಯತ್ನಿಸಿದರು.
ಕೂಡಲೇ ಜಾಗೃತರಾದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಯು ನಿಲ್ದಾಣದ ಹಳಿಗಳ ಮೇಲೆ ಜಿಗಿದು, ಕೆಳಗಿದ್ದ ಮಹಿಳೆಯನ್ನು ಎಬ್ಬಿಸಿ ಮೇಲಕ್ಕೆತ್ತಿದರು. ಕೂಡಲೇ ನಿಲ್ದಾಣದ ನಿರ್ವಾಹಕರಿಗೆ ವಿಷಯ ಮುಟ್ಟಿಸಿ, ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಯಿತು.
GOOD NEWS: ಇನ್ನಷ್ಟು ಕುಸಿತವಾಯ್ತು ಕೋವಿಡ್ ಪ್ರಕರಣ; ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆ
ನಂತರ ಪೊಲೀಸರು ವಿಚಾರಣೆ ನಡೆಸಿದಾಗ ವೃದ್ಧ ಮಹಿಳೆಯು ಹರಿಯಾಣದ ಭಿವಂಡಿ ಜಿಲ್ಲೆಯವರು ಎಂದು ತಿಳಿದುಬಂದಿದೆ. ಆಕೆ ಎಲೆಕ್ಟ್ರಾನಿಕ್ಸ್ ಸಿಟಿ ಕಡೆಗೆ ಚಲಿಸುತ್ತಿದ್ದ ಮೆಟ್ರೋದಿಂದ ಇಳಿದು, ಸೀದಾ ಮುಂದೆ ಹೋಗಿ ಹಳಿಗಳ ಮೇಲೆಯೇ ಜಿಗಿದು ಮಲಗಿಬಿಟ್ಟಿದ್ದಾರೆ ಎಂಬುದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ಬಯಲಾಗಿದೆ.
ಮನೆಯಲ್ಲಿನ ಸಮಸ್ಯೆಗಳಿಂದ ಬೇಸತ್ತು ಇಂಥ ಕೃತ್ಯ ಎಸಗಿದೆ ಎಂದು ವೃದ್ಧೆಯು ಕಣ್ಣೀರು ಸುರಿಸಿದ್ದಾರೆ. ಆಕೆಯ ಪುತ್ರನಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ ಸಿಐಎಸ್‌ಎಫ್ ಸಿಬ್ಬಂದಿಯು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಜನರ ಮನಗೆದ್ದಿದ್ದಾರೆ.