ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (CISF) 1,110 ಹುದ್ದೆಗಳನ್ನು ತುಂಬಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಿಐಎಸ್ಎಫ್ ಅಧಿಕೃತ ವೆಬ್ಸೈಟ್ (https://www.cisfrectt.in) ನಲ್ಲಿ ಬಿಡುಗಡೆ ಮಾಡಲಾದ ಅಧಿಕೃತ ಅಧಿಸೂಚನೆಯ ಪ್ರಕಾರ, ಕಾನ್ಸ್ಟೆಬಲ್-ಫೈರ್ (ಪುರುಷ)ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
*CISF ನೇಮಕಾತಿ 2022: ಹುದ್ದೆಯ ವಿವರಗಳು *
ಒಟ್ಟು 1,149 ಹುದ್ದೆಗಳನ್ನು ಪ್ರಕಟಿಸಲಾಗಿದೆ. General – 489, EWS – 113, SC – 161, ST – 137 ಮತ್ತು OBC – 249.
CISF ನೇಮಕಾತಿ 2022: ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ವಿಜ್ಞಾನ ವಿಷಯದಲ್ಲಿ, ಮಾನ್ಯತೆ ಪಡೆದ ಮಂಡಳಿ, ವಿಶ್ವವಿದ್ಯಾಲಯದಿಂದ 12 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
BIG NEWS: ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್
CISF ನೇಮಕಾತಿ 2022: ವಯಸ್ಸಿನ ಮಿತಿ ?
ಅಭ್ಯರ್ಥಿಗಳು ಮಾರ್ಚ್ 4, 2022 ರಂತೆ 18-23 ವರ್ಷಗಳ ನಡುವೆ ಇರಬೇಕು.
CISF ನೇಮಕಾತಿ 2022: ವೇತನ ಶ್ರೇಣಿ
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ, 21,700 ದಿಂದ 69,100 ರೂ.ಗಳ ವರೆಗೆ ಸಂಬಳ ನೀಡಲಾಗುತ್ತದೆ.
CISF ನೇಮಕಾತಿ 2022: ಅರ್ಜಿ ಸಲ್ಲಿಸುವುದು ಹೇಗೆ?
CISF ನ ಅಧಿಕೃತ ವೆಬ್ಸೈಟ್ನಲ್ಲಿ (www.cisfrectt.in) ಆನ್ಲೈನ್ ಮೋಡ್ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.
CISF ನೇಮಕಾತಿ 2022: ಅರ್ಜಿ ಶುಲ್ಕ?
ಅರ್ಜಿ ಸಲ್ಲಿಸಲು 100 ರೂ. ಶುಲ್ಕ ಪಾವತಿಸಬೇಕು. SC, ST ಮತ್ತು ESM ಗೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
CISF ನೇಮಕಾತಿ 2022: ಕೊನೆಯ ದಿನಾಂಕ?
ಆನ್ಲೈನ್ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ 04/03/2022, ಸಮಯ ಸಂಜೆ 5:00.