ವಿಡಿಯೋ | CISF ಅಧಿಕಾರಿ ಸಮಯಪ್ರಜ್ಞೆಯಿಂದ ಉಳಿಯಿತು ಜೀವ 23-12-2022 9:48PM IST / No Comments / Posted In: Latest News, India, Live News ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರ ಮೇಲೆ ಕಾರ್ಡಿಯೋ ಪಲ್ಮನರಿ ರೆಸ್ಪಿರೇಷನ್ (ಸಿಪಿಆರ್) ಪ್ರಕ್ರಿಯೆ ನಡೆಸುವ ಮೂಲಕ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿ.ಐ.ಎಸ್.ಎಫ್) ಇನ್ಸ್ ಪೆಕ್ಟರ್ ರೊಬ್ಬರು ಅಮೂಲ್ಯ ಜೀವವನ್ನು ಉಳಿಸಿದ್ದಾರೆ. ಇಡೀ ಘಟನೆಯ ವಿಡಿಯೋವನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದಿಯೋಧರ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. “CISF ಜವಾನರ ತ್ವರಿತ ಕ್ರಮವು ಅಹಮದಾಬಾದ್ ಏರ್ ಪೋರ್ಟ್ ನಲ್ಲಿ ಒಂದು ಜೀವವನ್ನು ಉಳಿಸಿದೆ. ಈ ಮಹಾನ್ ಶಕ್ತಿಗೆ ಸೆಲ್ಯೂಟ್ ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ವರದಿಗಳ ಪ್ರಕಾರ ಪ್ರಯಾಣಿಕ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದರು. ಸ್ಥಳದಲ್ಲಿದ್ದ CISF ಸಬ್ ಇನ್ಸ್ ಪೆಕ್ಟರ್ ಕಪಿಲ್ ರಾಘವ್ ಅವರು ತಕ್ಷಣ ಪ್ರಯಾಣಿಕರ ಸಹಾಯಕ್ಕೆ ಧಾವಿಸಿ ಅವರಿಗೆ ಸಿಪಿಆರ್ ಮಾಡಿದರು. ಇದರಿಂದ ಪ್ರಯಾಣಿಕರ ಪ್ರಾಣ ಉಳಿದು ಅವರು ನಂತರ ಚೇತರಿಸಿಕೊಂಡರು. ಬಿಜೆಪಿ ನಾಯಕರ ವಿಡಿಯೋ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅಹಮದಾಬಾದ್ ವಿಮಾನ ನಿಲ್ದಾಣದ ಅಧಿಕಾರಿಗಳು ಅವರ ಶ್ಲಾಘನೀಯ ಕಾರ್ಯಕ್ಕಾಗಿ ಇನ್ಸ್ ಪೆಕ್ಟರ್ ನನ್ನು ಶ್ಲಾಘಿಸಿದರು. ಪ್ರಯಾಣಿಕರ ಜೀವ ಉಳಿಸಿದ ಅವರ ತ್ವರಿತ ಕ್ರಮಕ್ಕಾಗಿ ಇಂಟರ್ನೆಟ್ ಬಳಕೆದಾರರು ಸಿಐಎಸ್ಎಫ್ ಇನ್ಸ್ ಪೆಕ್ಟರ್ ರನ್ನ ಶ್ಲಾಘಿಸಿದ್ದಾರೆ. ” Prompt action of CISF Jawan's saved a life at @ahmairport.Salute to this great force 🙏 pic.twitter.com/miBP4g8Ft6 — Sunil Deodhar (Modi Ka Parivar) (@Sunil_Deodhar) December 22, 2022