ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಹೊರಗೆ ಅಳವಡಿಸಿದ್ದ 20 ಅಡಿ ಕಬ್ಬಿಣದ ಗ್ರಿಲ್‌ನಲ್ಲಿ ಸಿಲುಕಿಕೊಂಡಿದ್ದ 10 ವರ್ಷದ ಬಾಲಕಿಯೊಬ್ಬಳನ್ನು, ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಒಬ್ಬರು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಬಾಲಕಿ ನಿಲ್ದಾಣದ ಗೇಟ್ ಸಂಖ್ಯೆ 1ರ ಮೆಟ್ಟಿಲುಗಳ ಉದ್ದಕ್ಕೂ ನಿರ್ಮಿಸಲಾಗಿದ್ದ 20 ಅಡಿ ಎತ್ತರದ ಗ್ರಿಲ್ ಅನ್ನು ಗೋಡೆಯ ನೆರವಿನೊಂದಿಗೆ ಹತ್ತಿದ್ದಾಳೆ. ಈ ವೇಳೆ ಆಕೆ ಗ್ರಿಲ್‌ಗೆ ಸಿಲುಕಿಕೊಂಡಿದ್ದಾಳೆ. ಈ ಸಮಯದಲ್ಲಿ ಆ ಸ್ಥಳದಲ್ಲಿದ್ದ, ಸಿಐಎಸ್ಎಫ್ ಕಾನ್ಸ್‌ಟೇಬಲ್ ಎನ್‌ಕೆ ನಾಯಕ್ ಅವರು ಚುರುಕಾಗಿ ವರ್ತಿಸಿ, ಗ್ರಿಲ್‌ನಲ್ಲಿ ಸಿಲುಕಿಕೊಂಡಿದ್ದ ಬಾಲಕಿಯನ್ನು ರಕ್ಷಿಸಿದ್ದಾರೆ ಎಂದು ಹಿರಿಯ ಸಿಐಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BIG NEWS: ಕಾಂಗ್ರೆಸ್ ರಾಜಕೀಯ ಹಿತಾಸಕ್ತಿಗೆ ಸಂಕಷ್ಟಕ್ಕೀಡಾದ ಜನರು; ಪಾದಯಾತ್ರೆ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ
ಇನ್ನು ದೆಹಲಿ-ಎನ್‌ಸಿಆರ್‌ನಲ್ಲಿನ 130 ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಿಗೆ ಭಯೋತ್ಪಾದನಾ ನಿಗ್ರಹ ರಕ್ಷಣೆಯನ್ನು ಒದಗಿಸಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು (ಸಿಐಎಸ್‌ಎಫ್) ನಿಯೋಜಿಸಲಾಗಿದೆ. ಇನ್ನು ಈ ಘಟನೆಯನ್ನು ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆಟ್ಟಿಗರು ನಾಯಕ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.