ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಹೆಡ್ ಕಾನ್ಸ್ಟೇಬಲ್ ಜಿಡಿ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಪುರುಷ ಮತ್ತು ಮಹಿಳೆ ಸೇರಿ 249 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆಯನ್ನು ಹೊರಡಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CISF (cisf.gov.in) ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜನವರಿ 31, 2022 ರೊಳಗೆ ಕಳುಹಿಸಬಹುದು.
CISF ಹೆಡ್ ಕಾನ್ಸ್‌ಟೇಬಲ್ GD ನೇಮಕಾತಿಯ ಅಪ್ಲಿಕೇಷನ್ ಪ್ರಕ್ರಿಯೆ ಡಿಸೆಂಬರ್ 20, 2021 ರಲ್ಲಿ ಪ್ರಾರಂಭವಾಗಿದ್ದು, ಜನವರಿ 31, 2022 ರವರೆಗೆ ಸಮಯಾವಕಾಶವಿದೆ. ಹುದ್ದೆಯ ವಿವರಗಳನ್ನ ನೋಡುವುದಾದರೆ, ಪುರುಷ ಅಭ್ಯರ್ಥಿಗಳಿಗೆ ಲಭ್ಯವಿರುವ ಖಾಲಿ ಹುದ್ದೆಗಳು- 181, ಮಹಿಳಾ ಅಭ್ಯರ್ಥಿಗಳಿಗೆ ಖಾಲಿ ಇರುವ ಹುದ್ದೆಗಳು- 68. ಈ ಖಾಲಿ ಹುದ್ದೆಗಳ ಸಂಖ್ಯೆಯು ತಾತ್ಕಾಲಿಕವಾಗಿದ್ದು, ಆಡಳಿತಾತ್ಮಕ ಕಾರಣಗಳಿಂದಾಗಿ ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಬದಲಾಗಬಹುದು. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಸ್ಪಷ್ಟತೆ ಪಡೆಯಲು CISF ಹೆಡ್ ಕಾನ್ಸ್‌ಟೇಬಲ್ GD ನೇಮಕಾತಿ 2022 ಅಧಿಸೂಚನೆಯ ಮೂಲಕ ಹೋಗಬೇಕು. ಅಭ್ಯರ್ಥಿಗಳ ವಯಸ್ಸಿನ ಮಿತಿ, ಆಗಸ್ಟ್ 1, 2021 ರಂತೆ 18 ವರ್ಷದಿಂದ 23 ವರ್ಷಗಳ ನಡುವೆ ಇರಬೇಕು.
ಅರ್ಹತಾ ಮಾನದಂಡಗಳನ್ನ ನೋಡುವುದಾದರೆ, ಅಭ್ಯರ್ಥಿಗಳು ಆಟ, ಕ್ರೀಡೆ ಮತ್ತು ಅಥ್ಲೆಟಿಕ್ಸ್ ನಲ್ಲಿ, ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೆಡಿಟ್‌ನೊಂದಿಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 12 ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ಆಯ್ಕೆಯನ್ನು, ಸೆಪ್ಟೆಂಬರ್ 1, 2019 ರಿಂದ ಮಾರ್ಚ್ 31, 2022 ರವರೆಗೆ ನಡೆದ ಕ್ರೀಡಾ ಪಂದ್ಯಾವಳಿಗಳಲ್ಲಿನ ಅವರ ಪ್ರದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತೀಯ ಪ್ರಾಂತ್ಯದಲ್ಲಿ ಮತ್ತು ವಿದೇಶದಲ್ಲಿ ಎಲ್ಲಿಯಾದರೂ ನೇಮಿಸಲಾಗುವುದು. ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.100 ಪಾವತಿಸಬೇಕಾಗುತ್ತದೆ. ಸ್ತ್ರೀ, SC ಮತ್ತು ST ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಅನ್ವಯಿಸುವುದಿಲ್ಲ.