![](https://kannadadunia.com/wp-content/uploads/2021/03/arrest_jail_court-770x433-1.jpg)
ಬೆಂಗಳೂರು: ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ ವಂಚಿಸಿದ್ದ ಸಿನಿಮಾ ನಿರ್ದೇಶಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಬಸವೇಶ್ವರನಗರ ನಿವಾಸಿ ಕರಮಲ ಬಾಲ ರವೀಂದ್ರನಾಥ್ ಹಾಗೂ ಶಿವಕುಮಾರ್ ಬಂಧಿತರು ಎಂದು ಹೇಳಲಾಗಿದೆ.
ರಾಜಾಜಿನಗರದ ಫೆಡರಲ್ ಬ್ಯಾಂಕ್ ಶಾಖೆಯಲ್ಲಿ 1 ಕೆಜಿ ಚಿನ್ನ ಅಡವಿಟ್ಟು 42 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ್ದರು. ನಿರ್ದೇಶಕ ರವೀಂದ್ರನಾಥ್ ಮತ್ತು ಆತನ ಪರಿಚಿತ ಚಿನ್ನಾಭರಣ ವ್ಯಾಪಾರಿ ಶಿವಕುಮಾರ್ ನಕಲಿ ಚಿನ್ನ ಅಡವಿಟ್ಟು 42 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದು, ಬಡ್ಡಿ ಪಾವತಿಸಿರಲಿಲ್ಲ. ಬ್ಯಾಂಕಿನಿಂದ ಹಲವು ಬಾರಿ ನೋಟಿಸ್ ಜಾರಿ ಮಾಡಿ ಎಂದು ಡಿಫಾಲ್ಟರ್ ಎಂದು ಪರಿಗಣಿಸಲಾಗಿದೆ. ಹರಾಜು ಮೂಲಕ ಚಿನ್ನ ಮಾರಾಟ ಮಾಡಲು ನಿರ್ಧರಿಸಿದ ಬ್ಯಾಂಕಿನ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅದು ನಕಲಿ ಚಿನ್ನ ಎನ್ನುವುದು ಗೊತ್ತಾಗಿದೆ. ರಾಜಾಜಿನಗರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.