ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮುಂದುವರೆದಿದ್ದು ನೇಮಕಾತಿ ವಿಭಾಗದ ವಿಭಾಗಕ್ಕೂ ಸಿಐಡಿ ಎಂಟ್ರಿಕೊಟ್ಟಿದ್ದಾರೆ.
ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಬ್ಬರು ಮಧ್ಯವರ್ತಿಗಳನ್ನು ಕೂಡ ಸಿಐಡಿ ವಶಕ್ಕೆ ಪಡೆದುಕೊಂಡಿದೆ.
ಮಧ್ಯವರ್ತಿಗಳಾದ ಮಂಜುನಾಥ್, ಶರತ್, ನೇಮಕಾತಿ ವಿಭಾಗದ ಅಧಿಕಾರಿಗಳಾದ ಹರ್ಷ, ಶ್ರೀನಿವಾಸ್, ಶ್ರೀಧರ್, ಲೋಕೇಶ್ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆನ್ನಲಾಗಿದೆ.