ಬೆಂಗಳೂರು: ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ರಾಜಸ್ಥಾನದ ಮೂವರು ಸೈಬರ್ ಖದೀಮರನ್ನು ಬಂಧಿಸಿದ್ದಾರೆ. ಸಾಕೀರ್, ಕಸಮ್ ಖಾನ್, ಜಮೀಲ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ.
ಫೇಸ್ಬುಕ್ ಮೂಲಕ ಯುವಕರ ನಂಬರ್ ಪಡೆದು ಯುವತಿಯರ ಹೆಸರಿನಲ್ಲಿ ವಿಡಿಯೋ ಕಾಲ್ ಮಾಡುತ್ತಿದ್ದರು. ಹುಡುಗರ ಅಶ್ಲೀಲ ವೀಡಿಯೋ ರೆಕಾರ್ಡ್ ಮಾಡುತ್ತಿದ್ದರು. ಈ ವಿಡಿಯೋ ಇಟ್ಟುಕೊಂಡು ಹಣ ಕೊಡುವಂತೆ ಬ್ಲಾಕ್ಮೇಲ್ ಮಾಡುತ್ತಿದ್ದರು. ಹಣ ಕೊಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಕುರಿತಾಗಿ ಸರಣಿ ದೂರುಗಳು ದಾಖಲಾಗಿದ್ದು, ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.