ಐಸಿಐಸಿಐ ಬ್ಯಾಂಕ್, ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಬ್ಯಾಂಕ್ ಇಂದು ಹಬ್ಬದ ಬೊನಾನ್ಜಾ ಆರಂಭಿಸಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಪ್ರೀಮಿಯಂ ಬ್ರಾಂಡ್‌ಗಳು ಮತ್ತು ಐಷಾರಾಮಿ ವಸ್ತುಗಳು ಸೇರಿದಂತೆ ಸಾವಿರಾರು ಉತ್ಪನ್ನಗಳ ಮೇಲೆ ತ್ವರಿತ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್‌ಗಳ ಸಂಪೂರ್ಣ ಪ್ಯಾಕೇಜ್ ಆಗಿದೆ.
ಬಿಪಿಎಲ್ ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ‘ಜನ್ಮ’ ಜಾಲಾಡಿದ ಆಹಾರ ಇಲಾಖೆ, ತಂತ್ರಾಂಶದಲ್ಲಿ ಅಕ್ರಮ ಪತ್ತೆ
ಐಸಿಐಸಿಐ ಬ್ಯಾಂಕ್ ಗ್ರಾಹಕರು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಕಾರ್ಡ್‌ಲೆಸ್ ಇಎಂಐಗಳನ್ನು ಬಳಸಿಕೊಂಡು ಆಕರ್ಷಕ ರಿಯಾಯಿತಿಗಳನ್ನು ಪಡೆಯಬಹುದು. ಪ್ರಮುಖ ಬ್ರಾಂಡ್‌ಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೊಡುಗೆ ಲಭ್ಯವಿದೆ.
ಫ್ಲಿಪ್‌ಕಾರ್ಟ್, ಅಮೆಜಾನ್, ಮಿತ್ರ, ಟಾಟಾ ಕ್ಲಿಕ್ ಮತ್ತು ಪೇಟಿಎಂ ಮಾಲ್‌ನಂತಹ ಪ್ರಮುಖ ಇ-ಕಾಮರ್ಸ್ ಕಂಪನಿಗಳ ಆನ್‌ಲೈನ್ ಶಾಪಿಂಗ್‌ನಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುವುದು. ಇದಲ್ಲದೆ ಕೆಲ ಅಂತರಾಷ್ಟ್ರೀಯ, ಐಷಾರಾಮಿ ಬ್ರ್ಯಾಂಡ್ ಗಳ ಮೇಲೆ ಶೇಕಡಾ 10ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ.
ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ಪೆಟ್ರೋಲ್-ಡೀಸೆಲ್ ದರ ಮತ್ತೆ ಹೆಚ್ಚಳ
ಎಲ್‌ಜಿ, ಬಾಷ್, ಕ್ಯಾರಿಯರ್, ಡೆಲ್, ಯುರೇಕಾ ಫೋರ್ಬ್ಸ್, ಗೋದ್ರೆಜ್ ಉಪಕರಣಗಳು, ಹೈಯರ್, ಪ್ಯಾನಾಸೋನಿಕ್, ಸೋನಿ, ಸೀಮೆನ್ಸ್, ವೋಲ್ಟಾಸ್ ಇನ್ನೂ ಹಲವು ಪ್ರಮುಖ ಎಲೆಕ್ಟ್ರಾನಿಕ್ಸ್ ಬ್ರಾಂಡ್‌ಗಳ ಮೇಲೆ ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ. ಅನೇಕ ಮೊಬೈಲ್ ಗಳ ಮೇಲೆ ಬ್ಯಾಂಕ್ ಆಕರ್ಷಕ ಕೊಡುಗೆ ನೀಡ್ತಿದೆ. ಬಟ್ಟೆ ಮತ್ತು ಆಭರಣಗಳ ಖರೀದಿ ಮೇಲೆ ಬ್ಯಾಂಕ್ 5,000 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ನೀಡಲಿದೆ. ದಿನಸಿ ವಸ್ತುಗಳ ಮೇಲೂ ಬ್ಯಾಂಕ್ ಆಕರ್ಷಕ ಕೊಡುಗೆ ನೀಡ್ತಿದೆ.
ಗ್ರಾಹಕರು, ಗೃಹ ಸಾಲದ ಮೇಲೆ ಆಕರ್ಷಕ ಬಡ್ಡಿದರಗಳನ್ನು ಶೇಕಡಾ 6.70 ರಿಂದ ಪಡೆಯಬಹುದು. ಸಂಸ್ಕರಣಾ ಶುಲ್ಕದ ದರ 1100 ರೂಪಾಯಿಯಿಂದ ಆರಂಭವಾಗಲಿದೆ. ವಾಹನ ಖರೀದಿ ಮೇಲೂ ಬ್ಯಾಂಕ್ ಆಕರ್ಷಕ ಕೊಡುಗೆ ನೀಡ್ತಿದೆ.