Video: ಹಣಕ್ಕಾಗಿ ಹೆಣದ ಮುಂದೆ ಅಳುತ್ತಿದ್ದರಂತೆ ಚಂಕಿ ಪಾಂಡೆ; ಶಾಕಿಂಗ್ ಸಂಗತಿ ಬಿಚ್ಚಿಟ್ಟ ಹಿರಿಯ ನಟ…! 02-12-2024 11:11AM IST / No Comments / Posted In: Featured News, Live News, Entertainment ಚಂಕಿ ಪಾಂಡೆ ಅವರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಹೆಚ್ಚುವರಿ ಆದಾಯವನ್ನು ಗಳಿಸಲು ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆಘಾತಕಾರಿ ಘಟನೆಯೊಂದನ್ನು ಹಂಚಿಕೊಂಡ ಅವರು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನನಗೆ ಆಹ್ವಾನ ಬಂದಿತ್ತು, ಆದರೆ ಬಳಿಕ ಅದು ಅಂತ್ಯಕ್ರಿಯೆ ಎಂದು ಅರಿವಿಗೆ ಬಂತು. ನಾನು ಆಯೋಜಕರನ್ನು ನೋಡಿದಾಗ ಅವರು, ಸರ್, ಚಿಂತಿಸಬೇಡಿ, ನಿಮ್ಮ ಹಣ ನನ್ನ ಬಳಿ ಇದೆ. ಆದರೆ ನೀವು ಹೆಚ್ಚು ಅಳುತ್ತಿದ್ದರೆ ಮನೆಯವರು ನಿಮಗೆ ಹೆಚ್ಚಿನ ಹಣವನ್ನು ನೀಡುತ್ತಾರೆ ಎಂದು ಹೇಳಿದರು ಎಂದರು. ನೆಟ್ಫ್ಲಿಕ್ಸ್ನಲ್ಲಿ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಕಾಣಿಸಿಕೊಂಡ ಚಂಕಿ, “ಒಂದು ಬೆಳಿಗ್ಗೆ, ನನಗೆ ಸಂಘಟಕರಿಂದ ಕರೆ ಬಂದಿತು. ಅವರು ನೀವು ಇಂದು ಏನು ಮಾಡುತ್ತಿದ್ದೀರಿ ? ಎಂದಾಗ ಈಗಷ್ಟೇ ಶೂಟಿಂಗ್ ಗೆ ಹೊರಡುತ್ತಿದ್ದೇನೆ ಎಂದು ಹೇಳಿದೆ. ಅದು ಎಲ್ಲಿದೆ ಎಂದಾಗ ಫಿಲ್ಮ್ ಸಿಟಿಯಲ್ಲಿ ಎಂದು ಉತ್ತರಿಸಿದೆ. ಆಗ ಅವರು ಮಾರ್ಗ ಮಧ್ಯದಲ್ಲಿ ಒಂದು ಚಿಕ್ಕ ಕಾರ್ಯಕ್ರಮವಿದೆ. ಇಲ್ಲಿಗೆ ಬರುವಾಗ ಬಿಳಿ ಬಟ್ಟೆ ಧರಿಸಿಕೊಂಡು ಬನ್ನಿ ಎಂದು ಹೇಳಿದರು. ಅದರಂತೆ ಬಿಳಿ ಉಡುಪು ಧರಿಸಿ ನಾನು ಸ್ಥಳವನ್ನು ತಲುಪಿದಾಗ, ಹಲವಾರು ಜನರು ಹೊರಗೆ ನಿಂತು ಬಿಳಿ ಬಟ್ಟೆ ಧರಿಸಿರುವುದನ್ನು ಗಮನಿಸಿದೆ. ಒಳಗೆ ಹೋಗುತ್ತಿದ್ದಂತೆ, ಹಲವರು ನನ್ನನ್ನು ದಿಟ್ಟಿಸಿ ನೋಡಿ “ಚಂಕಿ ಪಾಂಡೆ ಬಂದಿದ್ದಾರೆ” ಎಂದು ಪಿಸುಗುಟ್ಟಿದರು. “ನಾನು ಮೃತದೇಹವನ್ನು ನೋಡಿದ ಬಳಿಕ ಅಂತ್ಯಕ್ರಿಯೆಯಲ್ಲಿದ್ದೇನೆ ಎಂದು ಅರಿತುಕೊಂಡೆ. ನಾನು ಮೂಲೆಯಲ್ಲಿದ್ದ ಸಂಘಟಕನನ್ನು ನೋಡಿ ಅವರನ್ನು ಕೇಳಿದಾಗ, ‘ಸರ್, ಚಿಂತಿಸಬೇಡಿ, ನಿಮ್ಮ ಪ್ಯಾಕೆಟ್ (ಹಣದ) ನನ್ನ ಬಳಿ ಇದೆ, ಆದರೆ ನೀವು ಅಳುತ್ತಿದ್ದರೆ, ಅವರು ನಿಮಗೆ ಹೆಚ್ಚಿನ ಹಣವನ್ನು ಕೊಡುತ್ತಾರೆ ಎಂದು ಹೇಳಿದರು ಎಂದು ಚಂಕಿ ಪಾಂಡೆ ವಿವರಿಸಿದ್ದಾರೆ. View this post on Instagram A post shared by welcome to my Page 💕🙏 (@comics.1p) View this post on Instagram A post shared by Chunky Panday (@chunkypanday)