alex Certify ಗಣರಾಜ್ಯೋತ್ಸವದಂದು ಭಾರತ ವಾಸಿಗಳಿಗೆ ಶುಭ ಹಾರೈಸಿದ ಜಾಂಟಿ ರೋಡ್ಸ್ ಮತ್ತು ಕ್ರಿಸ್ ಗೇಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣರಾಜ್ಯೋತ್ಸವದಂದು ಭಾರತ ವಾಸಿಗಳಿಗೆ ಶುಭ ಹಾರೈಸಿದ ಜಾಂಟಿ ರೋಡ್ಸ್ ಮತ್ತು ಕ್ರಿಸ್ ಗೇಲ್

ಭಾರತದ 73ನೇ ಗಣರಾಜ್ಯೋತ್ಸವದಂದು ವೆಸ್ಟ್ ಇಂಡೀಸ್‌ನ ಸ್ಪೋಟಕ ಬ್ಯಾಟರ್ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭಾರತ ವಾಸಿಗಳಿಗೆ ಶುಭ ಹಾರೈಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಸಂದೇಶಗಳನ್ನು ಸ್ವೀಕರಿಸಿದ ನಂತರ ಇಬ್ಬರೂ ಟ್ವಿಟರ್‌ ಮೂಲಕ ತಮ್ಮ ಶುಭ ಕಾಮನೆಗಳನ್ನು ತಿಳಿಸಿದ್ದಾರೆ.

ವಿಂಡೀಸ್‌ನ 42 ವರ್ಷದ ಗೇಲ್, ಭಾರತೀಯ ಸಾರ್ವಜನಿಕರೊಂದಿಗೆ ತಮ್ಮ ವಿಶೇಷ ಬಾಂಧವ್ಯದ ಬಗ್ಗೆ ಮಾತನಾಡಿ, “ನಾನು ಭಾರತದ 73 ನೇ ಗಣರಾಜ್ಯೋತ್ಸವದಂದು ಭಾರತೀಯರನ್ನು ಅಭಿನಂದಿಸಲು ಬಯಸುತ್ತೇನೆ. ಪ್ರ‌ಧಾನಿ ಮೋದಿ @narendramodi ಅವರೊಂದಿಗೆ ಮತ್ತು ಭಾರತದ ಜನರೊಂದಿಗೆ ನನ್ನ ನಿಕಟ ವೈಯಕ್ತಿಕ ಸಂಬಂಧವನ್ನು ಪುನರುಚ್ಚರಿಸುವ ವೈಯಕ್ತಿಕ ಸಂದೇಶ ಇದಾಗಿದೆ. ಯೂನಿವರ್ಸ್ ಭಾಸ್ ಕಡೆಯಿಂದ ಪ್ರೀತಿಯಿಂದ ಅಭಿನಂದನೆಗಳು,” ಎಂದು ಟ್ವೀಟ್ ಮಾಡಿದ್ದಾರೆ.

KSRTC ಬಸ್-ಕ್ಯಾಂಟರ್ ನಡುವೆ ಭೀಕರ ಅಪಘಾತ

ಭಾರತದಲ್ಲಿ ವರ್ಷದ ಒಂದಷ್ಟು ತಿಂಗಳು ನೆಲೆಸಿರುವ ಮುಂಬೈ ಇಂಡಿಯನ್ಸ್‌ನ ಫೀಲ್ಡಿಂಗ್ ತರಬೇತುದಾರ ದಕ್ಷಿಣ ಆಫ್ರಿಕಾದ ರೋಡ್ಸ್‌‌ಗೆ ‘ಇಂಡಿಯಾ’ ಹೆಸರಿನ ಮಗಳಿದ್ದರೆ, ವೆಸ್ಟ್ ಇಂಡೀಸ್ ಆಟಗಾರ ಗೇಲ್ ಅವರು ಐಪಿಎಲ್‌ನಲ್ಲಿ ತಮ್ಮ ಆಟ ಹಾಗೂ ಮನರಂಜನೆಯಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಸಂಚಲನವಾಗಿದ್ದಾರೆ.

ಗೇಲ್ ಟ್ವೀಟ್ ಮಾಡಿದ ಒಂದೆರಡು ಗಂಟೆಗಳ ನಂತರ, ಜಾಂಟಿ ರೋಡ್ಸ್ ಕೂಡ ಭಾರತದ ಗಣರಾಜ್ಯೋತ್ಸವಕ್ಕೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. “ನರೇಂದ್ರ ಮೋದಿ ಜೀ ತುಂಬಾ ಒಳ್ಳೆಯ ಮಾತುಗಳಿಗಾಗಿ ಧನ್ಯವಾದಗಳು. ಭಾರತಕ್ಕೆ ಪ್ರತಿ ಭೇಟಿಯ ಸಂದರ್ಭದಲ್ಲೂ ನಾನು ಒಬ್ಬ ವ್ಯಕ್ತಿಯಾಗಿ ತುಂಬಾ ಬೆಳೆದಿದ್ದೇನೆ. ನನ್ನ ಇಡೀ ಕುಟುಂಬವು ಭಾರತದೊಂದಿಗೆ #ಗಣರಾಜ್ಯೋತ್ಸವವನ್ನು ಆಚರಿಸುತ್ತದೆ, ಭಾರತೀಯ ಜನರ ಹಕ್ಕುಗಳನ್ನು ರಕ್ಷಿಸುವ #ಸಂವಿಧಾನದ ಪ್ರಾಮುಖ್ಯತೆಯನ್ನು ಗೌರವಿಸುತ್ತದೆ #ಜೈಹಿಂದ್” ಎಂದು ರೋಡ್ಸ್ ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪುಟದಲ್ಲಿ ಪ್ರಧಾನ ಮಂತ್ರಿಯ ಪತ್ರವನ್ನು ಹಂಚಿಕೊಂಡಿರುವ ರೋಡ್ಸ್‌, “ನಾನು ನಿಮಗೆ ಮತ್ತು ಭಾರತದ ಇತರ ಕೆಲವು ಸ್ನೇಹಿತರಿಗೆ ನಿಮ್ಮ ಪ್ರೀತಿಗೆ ಕೃತಜ್ಞತೆಯ ಭಾವದೊಂದಿಗೆ ಬರೆಯಲು ನಿರ್ಧರಿಸಿದೆ, ಭಾರತದ ಬಗ್ಗೆ ಮತ್ತು ನೀವು ನಮ್ಮ ರಾಷ್ಟ್ರದೊಂದಿಗೆ ಹಾಗೆಯೇ ನಮ್ಮ ಜನರೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುವ ಭರವಸೆ ಹೊಂದಿದ್ದೇನೆ,” ಎಂದು ಮೋದಿ ಹೇಳಿರುವುದನ್ನು ತೋರಿದ್ದಾರೆ.

ಮೋದಿ ಅವರು ರೋಡ್ಸ್ ಅವರ ಮಗಳ ಬಗ್ಗೆ ವಿಶೇಷ ಉಲ್ಲೇಖ ಮಾಡಿದ್ದರು, ”ನೀವು ನಿಮ್ಮ ಮಗಳಿಗೆ ಈ ಮಹಾನ್ ರಾಷ್ಟ್ರದ ಹೆಸರನ್ನು ಇಟ್ಟಾಗ, ನಮ್ಮ ದೇಶದ ಜೊತೆಗೆ ಈ ವಿಶೇಷ ಬಂಧವು ನಿಜವಾಗಿಯೂ ಪ್ರತಿಫಲಿಸುತ್ತದೆ. ನೀವು ನಿಜವಾಗಿಯೂ ನಮ್ಮ ರಾಷ್ಟ್ರಗಳ ನಡುವಿನ ಬಲವಾದ ಸಂಬಂಧಗಳ ವಿಶೇಷ ರಾಯಭಾರಿಯಾಗಿದ್ದೀರಿ,” ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...