ನವದೆಹಲಿ: ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಸಾವಿನ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆಯೇ ಎನ್ನುವ ಅನುಮಾನವಿದೆ.
ಹೆಲಿಕಾಪ್ಟರ್ ಪತನಕ್ಕೆ ಕಾರಣವಾದರೂ ಏನು? ಅಪಘಾತದ ಹಿಂದೆ ಬಾಹ್ಯ ಶಕ್ತಿಗಳ ಕೈವಾಡ ಇರಬಹುದೇ ಎನ್ನುವ ಅನುಮಾನ ಹೆಚ್ಚಾಗಿದೆ. ಅಂದ ಹಾಗೆ, ವಾಯುಪಡೆಯ ಹೆಲಿಕ್ಯಾಪ್ಟರ್ ಸುಸ್ಥಿತಿಯಲ್ಲೇ ಇರುತ್ತದೆ. ಈ ಕಾಪ್ಟರ್ ಪತನದ ಹಿಂದೆ ವಿದೇಶಿ ಅಥವಾ ಬಾಹ್ಯ ಶಕ್ತಿ ಕೈವಾಡ ಇರಬಹುದೆನ್ನುವ ಚರ್ಚೆಗಳು ನಡೆದಿದೆ. ಹಿಂದೆ ಖ್ಯಾತನಾಮರು ಕೂಡ ಇದೇ ರೀತಿ ಮೃತಪಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ.
ಹಿಂದೆ ಇಸ್ರೋ ವಿಜ್ಞಾನಿಗಳು ನಿಗೂಢವಾಗಿ ಮೃತಪಟ್ಟಿದ್ದರು. ಹೋಮಿ ಜಹಂಗೀರ್ ಬಾಬಾ ಅವರಿದ್ದ ವಿಮಾನ ಅಪಘಾತಕ್ಕೀಡಾಗಿತ್ತು. ಆಗ ಅಮೆರಿಕದ ಸಿಐಎ ಕೈವಾಡವಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.
ವಿಕ್ರಂ ಸಾರಾಭಾಯ್ ಅವರು ಕೂಡ ಹೆಲಿಕಾಪ್ಟರ್ ದುರಂತದಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಈಗ ಬಿಪಿನ್ ರಾವತ್ ಅವರ ಸಾವು ಕೂಡ ಇದೇ ರೀತಿ ಅನುಮಾನಕ್ಕೆ ಕಾರಣವಾಗಿದೆ.
ಕಳೆದ ವರ್ಷ ಇಸ್ರೇಲ್ ಸೇನಾ ಅಧಿಕಾರಿ ಗುರಿಯಾಗಿಸಿ ಏರ್ಪೋರ್ಟ್ ಬಳಿ ಕ್ಷಿಪಣಿ ದಾಳಿ ನಡೆಸಲಾಗಿತ್ತು. ಚೀನಾ ವಿರುದ್ಧ ಕಠಿಣ ನಿಲುವು ಹೊಂದಿದ್ದ ರಾವತ್ ಅವರ ಸಾವಿನ ಹಿಂದೆ ಚೀನಾ ಕೈವಾಡವಿರಬಹುದೇ ಎಂಬ ಅನುಮಾನ ಮೂಡಿದೆ. ತೈವಾನ್ ಸೇನೆಯ ಮುಖ್ಯಸ್ಥರು ಇದೇ ರೀತಿ ಮೃತಪಟ್ಟಿದ್ದರು. ಇನ್ನು ತಮಿಳುನಾಡಿನಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸಿರಬಹುದೇ ಎಂಬ ಅನುಮಾನ ಕೂಡ ಇದೆ. ಏನೇ ಕಾರಣಗಳಿದ್ದರೂ ತನಿಖೆಯಿಂದ ಮಾತ್ರ ಸತ್ಯಸಂಗತಿ ಬಯಲಾಗಲಿದೆ. ಕೇಂದ್ರ ಸರ್ಕಾರದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಉನ್ನತ ತನಿಖೆಗೆ ಆದೇಶಿಸಿದೆ.