alex Certify ‘ಛೂಮಂತರ್’ ಚಿತ್ರದ ಟೈಟಲ್ ಟ್ರಾಕ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಛೂಮಂತರ್’ ಚಿತ್ರದ ಟೈಟಲ್ ಟ್ರಾಕ್ ರಿಲೀಸ್

ಶರಣ್ ಅಭಿನಯದ ಬಹು ನಿರೀಕ್ಷಿತ ‘ಛೂಮಂತರ್’ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‌

ಕ್ರೇಜಿಸ್ಟಾರ್ ರವಿಚಂದ್ರನ್ ಈ ಹಾಡನ್ನು ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡು ಯೂಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಗಳಿಸಿದೆ.

ಕರ್ವಾ ನವ್ನೀತ್ ರಚಿಸಿ ನಿರ್ದೇಶಿಸಿರುವ ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಶರಣ್ ಸೇರಿದಂತೆ ಮೇಘನ ಗಾವಂಕರ್, ಅದಿತಿ ಪ್ರಭುದೇವ, ಚಿಕ್ಕಣ್ಣ, ರಜನಿ ಭಾರದ್ವಾಜ್, ಪ್ರಭು  ತೆರೆ ಹಂಚಿಕೊಂಡಿದ್ದಾರೆ. ತರುಣ್ ಸ್ಟುಡಿಯೋಸ್ ಬ್ಯಾನರ್ ನಡಿ ತರುಣ್ ಶಿವಪ್ಪ ಮತ್ತು ಅವರ ಪತ್ನಿ ಮಾನಸ ಈ ಸಿನೆಮಾಗೆ ಬಂಡವಾಳ ಹೂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...