alex Certify ಅಚ್ಚರಿಗೆ ಕಾರಣವಾಗಿದೆ ಮದುವೆಗೆ ತಯಾರಾಗೋ ಮುನ್ನ ವಧು ಇಟ್ಟ ಬೇಡಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಮದುವೆಗೆ ತಯಾರಾಗೋ ಮುನ್ನ ವಧು ಇಟ್ಟ ಬೇಡಿಕೆ…!

ಮದುವೆ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದ ವಧುವಿನ ಫನ್ನಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ವಧು ಕನ್ನಿಕಾ ಸಿಂಗ್​​ ಮದುವೆಗೆ ತಯಾರಾಗುತ್ತಿದ್ದರು. ಮದುವೆಯ ಲೆಹೆಂಗಾ ಹಾಗೂ ಎಲ್ಲಾ ಆಭರಣಗಳನ್ನ ಧರಿಸಿದ್ದರು. ಆಕೆಯ ಮೇಕಪ್​ ಕೂಡ ಭಾಗಶಃ ಪೂರ್ತಿಯಾಗಿತ್ತು. ಆದರೆ ಲಿಪ್​ಸ್ಟಿಕ್​ ಮಾತ್ರ ಇನ್ನೂ ಹಚ್ಚಿರಲಿಲ್ಲ. ಮೇಕಪ್​ ಆರ್ಟಿಸ್ಟ್​ ಇನ್ನೇನು ಲಿಪ್​ಸ್ಟಿಕ್​ ಹಚ್ಚಬೇಕು ಅನ್ನೋವಷ್ಟರಲ್ಲಿ ಕನ್ನಿಕಾ ನಾನು ಸ್ವಲ್ಪ ಚಾಕಲೇಟ್​ ತಿನ್ನಬಹುದಾ ಎಂದು ಕೇಳಿದ್ದಾಳೆ.

ಮೇಕಪ್​​ ಮಾಡುವ ಮಧ್ಯದಲ್ಲಿ ವಧು ಮುದ್ದು ಮುದ್ದಾಗಿ ಬೇಡಿಕೆಯನ್ನ ಇಟ್ಟಿದ್ದಾರೆ. ಲಿಪ್​ಸ್ಟಿಕ್​ ಹಚ್ಚಿಕೊಳ್ಳೋಕೂ ಮುನ್ನ ಒಂದು ಪೀಸ್​ ಚಾಕಲೇಟ್​ ತಿನ್ನಲೇ ಎಂದು ವಧು ಕನ್ನಿಕಾ ಕೇಳಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ವಿಡಿಯೋದಲ್ಲಿ ಯಾರೋ ಒಬ್ಬರು ಕನ್ನಿಕಾ ಬಳಿ ಏನನ್ನು ತಿನ್ನುತ್ತಿದ್ದೀಯಾ ಎಂದು ಕೇಳುತ್ತಾರೆ. ಇದಕ್ಕೆ ಕನ್ನಿಕಾ ಕ್ಯಾಮರಾ ಕಡೆಗೆ ಡೇರಿಮಿಲ್ಕ್​ ಸಿಲ್ಕ್ ಚಾಕಲೇಟ್​ನ್ನು ತೋರಿಸಿ ನಗೆಯಾಡುತ್ತಾ ಚಾಕಲೇಟ್​ ಅಂದರೆ ಲವ್​. ಚಾಕಲೇಟ್​ ಅಂದರೆ ಲೈಫ್​. ಚಾಕಲೇಟ್​ ಒಂದನ್ನೇ ತಿಂದು ನಾನು ಒಂದಿಡೀ ದಿನ ಇರಬಲ್ಲೆ ಎಂದು ಹೇಳಿದ್ದಾಳೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...