ಬೆಳಗೆದ್ದು ಬ್ರೇಕ್ಫಾಸ್ಟ್ ಮತ್ತು ಲಂಚ್ ಪ್ಯಾಕ್ ಮಾಡೋದಕ್ಕೆ ಏನ್ ಅಡುಗೆ ಮಾಡೋದಪ್ಪ ಅಂತಾ ಯೋಚ್ನೇ ಮಾಡ್ತೀದ್ದೀರಾ? ಹಾಗಾದ್ರೆ ನೀವು ತಪ್ಪದೇ ಚೋಲೆ ಕ್ಯಾಬೇಜ್ ರೈಸ್ ಬಾತ್ ಟ್ರೈ ಮಾಡಲೇಬೇಕು. ಚೋಲೆ ಮಸಾಲ ಬಳಸಿ ಮಾಡುವ ಈ ರೈಸ್ ಬಾತ್ ಬೆಳಗ್ಗಿನ ತಿಂಡಿಗಷ್ಟೇ ಅಲ್ಲದೇ ಮಧ್ಯಾಹ್ನದ ಲಂಚ್ ಬಾಕ್ಸ್ಗೂ ಹೊಂದುತ್ತದೆ. ಹಾಗಾದ್ರೆ ಚೋಲೆ ಕ್ಯಾಬೇಜ್ ರೈಸ್ ಬಾತ್ ಮಾಡುವ ವಿಧಾನ ಹೇಗೆ ಅನ್ನೋದನ್ನ ನೋಡೋಣ ಬನ್ನಿ.
ಮೊದಲಿಗೆ ಒಂದು ಕುಕ್ಕರ್ಗೆ 2 ಟೇಬಲ್ ಸ್ಪೂನ್ನಷ್ಟು ಎಣ್ಣೆ ಹಾಕಿಕೊಳ್ಳಿ, ಇದಕ್ಕೆ ಒಂದು ಸ್ಪೂನ್ ತುಪ್ಪ ಸೇರಿಸಿ, ಪಲಾವ್ ಎಲೆ, 2 ಅನಾನಸ್ ಎಲೆ, 2 ಚಕ್ಕೆ, 2 ಲವಂಗ ಸೇರಿಸಿ ಬಾಡಿಸಿಕೊಳ್ಳಿ. ಇದಕ್ಕೆ ಹೆಚ್ಚಿಟ್ಟುಕೊಂಡಿರುವ 2 ಈರುಳ್ಳಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
ಎಚ್ಚರ: ವಿಶೇಷ ಪರವಾನಿಗೆ ಇಲ್ಲದೆ ಗೋವಾ ಗಡಿ ದಾಟಿದ್ರೆ ಬೀಳುತ್ತೆ ಫೈನ್
ಬಳಿಕ ಅರ್ಧ ಚಮಚ ಅರಿಶಿನ, ಸಿಪ್ಪೆ ಬಿಡಿಸಿ ಕತ್ತರಿಸಿಟ್ಟುಕೊಂಡ ಒಂದು ಆಲೂಗೆಡ್ಡೆಯನ್ನು ಸೇರಿಸಿ ಹುರಿದುಕೊಳ್ಳಬೇಕು. ನಂತರ ಸಣ್ಣಗೆ ಹೆಚ್ಚಿಕೊಂಡ ಒಂದು ಕಪ್ನಷ್ಟು ಎಲೆಕೋಸನ್ನು ಸೇರಿಸಿ 1 ನಿಮಿಷಗಳ ಕಾಲ ಹುರಿದುಕೊಳ್ಳಬೇಕು. ಬಳಿಕ ಒಂದು ಕಪ್ ಹಸಿ ಬಟಾಣಿ ಸೇರಿಸಿ ಫ್ರೈ ಮಾಡಿಕೊಳ್ಳಬೇಕು.
ನಂತರ ಸಣ್ಣದಾಗಿ ಹೆಚ್ಚಿಕೊಂಡ ಮೆಂತ್ಯೆ ಸೊಪ್ಪು ಒಂದು ಸಣ್ಣ ಕಪ್ನಷ್ಟು, ಶುಂಠಿ , ಹಸಿ ಮೆಣಸಿನ ಕಾಯಿ , ಬೆಳ್ಳುಳ್ಳಿ ರುಬ್ಬಿಟ್ಟುಕೊಂಡ ಪೇಸ್ಟ್ ಒಂದು ಟೇಬಲ್ ಸ್ಪೂನ್ ಸೇರಿಸಿ ಹಸಿ ವಾಸನೆ ಹೋಗುವ ತನಕ ಹುರಿದುಕೊಳ್ಳಿ.
ಬಳಿಕ ಹೆಚ್ಚಿಟ್ಟುಕೊಂಡ ಒಂದು ಟೊಮ್ಯಾಟೋ, ಸೇರಿಸಿ ಒಂದೂವರೆ ಚಮಚದಷ್ಟು ಅಚ್ಚಖಾರದ ಪುಡಿ, ಚೋಲೆ ಮಸಾಲೆ ಒಂದು ಸ್ಪೂನ್ನಷ್ಟು ಹಾಕಿಕೊಳ್ಳಬೇಕು. ಈ ರೈಸ್ಬಾತ್ನ ವಿಶೇಷತೆಯೇ ಚೋಲೆ ಮಸಾಲೆ.
ಇದಕ್ಕೆ ನೆನೆಸಿಟ್ಟ ಒಂದು ಲೋಟ ಬಾಸುಮತಿ ಅಕ್ಕಿಯನ್ನು ಸೇರಿಸಿ ನಿಧಾನಕ್ಕೆ ಮಿಶ್ರಣ ಮಾಡಿ. ಇದಕ್ಕೆ 2 ಲೋಟ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಶಲ್ ಬಂದರೇ ಕ್ಯಾಬೇಜ್ ರೈಸ್ ಬಾತ್ ಸವಿಯಲು ಸಿದ್ಧ.
ಇದನ್ನು ಮೊಸರು ಬಜ್ಜಿ ಇಲ್ಲವೇ ಚಟ್ನಿ ಜೊತೆಗೆ ಸವಿಯಬಹುದು.