alex Certify ರಾಜ್ ಕುಮಾರ್ ಕನಸನ್ನು ನಮ್ಮ ಸರ್ಕಾರ ನನಸು ಮಾಡಲಿದೆ: ಸಿಎಂ ಸಿದ್ಧರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ ಕುಮಾರ್ ಕನಸನ್ನು ನಮ್ಮ ಸರ್ಕಾರ ನನಸು ಮಾಡಲಿದೆ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಡಾ. ರಾಜ್ ಕುಮಾರ್ ಅವರ ಕನಸನ್ನು ನಮ್ಮ ಸರ್ಕಾರ ನನಸು ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಅವರು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ 8 ಗಂಟೆಗೆ ಭೇಟಿಗೆ ಸಮಯ ಕೊಟ್ಟಿದ್ದರು. ಈ ಕಾರ್ಯಕ್ರಮಕ್ಕಾಗಿ ನಿನ್ನೆಯೇ ದೆಹಲಿಯಿಂದ ಹೊರಟು ಉದ್ಘಾಟನೆ ತಪ್ಪಿಸಬಾರದೆಂದು ಆಗಮಿಸಿದ್ದೇನೆ. ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ಸರ್ಕಾರ ಮೊದಲಿನಿಂದಲೂ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಾ ಬಂದಿದೆ, ಮುಂದೆಯೂ ಮಾಡಲಿದೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವನ್ನು ಪಿ.ಪಿ.ಪಿ ಮಾದರಿಯಲ್ಲಿ ಕೈಗೊಳ್ಳಲಿದ್ದು, ನೂರು ಎಕರೆಗೂ ಹೆಚ್ಚು ಜಮೀನು ಒದಗಿಸಲಾಗಿದೆ. ಚಿತ್ರನಗರಿ ಡಾ|| ರಾಜ್ ಕುಮಾರ್ ಅವರ ಕನಸಾಗಿತ್ತು, ಅದನ್ನು ನನಸಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಹೇಳಿದ್ದಾರೆ.

1972 ರಿಂದ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದವರು ಬಹಳ ಕಷ್ಟದ ದಿನಗಳಿದ್ದರೂ ಕೂಡ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ನಿರ್ಮಾಪಕರಿಗೆ ಅಭಿನಂದಿಸುತ್ತೇನೆ. ಸಂಘದ ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ಅಗತ್ಯ ನೆರವು ನೀಡುತ್ತೇವೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...