ಚಿತ್ರದುರ್ಗ: ಒಂದು ಕ್ಷಣದ ಕೋಪ ಎಂತಹ ದುರಂತಗಳನ್ನು ತಂದೊಡ್ಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಟಿವಿ ರಿಮೋಟ್ ಗಾಗಿ ಅಣ್ಣ-ತಮ್ಮ ಜಗಳವಾಡುತ್ತಿರುವುದನ್ನು ಕಂಡ ತಂದೆಯ ಸಿಟ್ಟು ಮಗನನ್ನೇ ಬಲಿ ಪಡೆದಿರುವ ಘಟನೆ ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ನಡೆದಿದೆ.
ಕೋಪವನ್ನು ನಿಯಂತ್ರಿಸಿಕೊಳ್ಳದಿದ್ದರೆ ಅದೇ ನಮ್ಮನ್ನು ನಿಯಂತ್ರಿಸಿದರೆ ಏಂತಹ ಅನಾಹುತ ಸಂಭವಿಸುತ್ತದೆ ನೋಡಿ. ಟಿವಿ ರಿಮೋಟ್ ಗಾಗಿ ಅಣ್ಣ-ತಮ್ಮ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಮಕ್ಕಳಿಬ್ಬರ ಜಗಳ ಕಂಡು ಸಿಟ್ಟಿಗೆದ್ದ ತಂದೆ ತನ್ನ ಕೈಲಿದ್ದ ಕತ್ತರಿಯನ್ನು ಜೋರಾಗಿ ಮಕ್ಕಳ ಕಡೆಗೆ ಎಸೆದಿದ್ದಾರೆ. ಕತ್ತರಿ ಹಿರಿ ಮಗನ ಕತ್ತಿನ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಗ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಚಂದ್ರಶೇಖರ್ (16) ಮೃತ ದುರ್ದೈವಿ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಂದೆ ಲಕ್ಷ್ಮಣ ಬಾಬು ನನ್ನು ವಶಕ್ಕೆ ಪಡೆದಿದ್ದಾರೆ.