![](https://kannadadunia.com/wp-content/uploads/2022/02/Crime-Branch-of-Delhi-police-arrested-the-2-suspects.jpg)
ಚಿತ್ರದುರ್ಗ: ಪತ್ನಿಯನ್ನು ಕೊಂದು ಕಥೆಕಟ್ಟಿ ಕಳ್ಳಾಟವಾಡುತ್ತಿದ್ದ ಪತಿಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಉಮಾಪತಿ ಬಂಧಿತ ಆರೋಪಿ. ಚಿತ್ರದುರ್ಗದ ಮೇದವಳ್ಳಿ ಗ್ರಾಮದ ನಿವಾಸಿ. ಉಮಾಪತಿ, ಪತ್ನಿ ಶ್ರೀದೇವಿಯ ಕತ್ತು ಹಿಸುಕಿ ಹತ್ಯೆಗೈದು ಬಳಿಕ ಪೂಜೆ ಮಾಡುವಾಗ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಕಥೆಕಟ್ಟಿದ್ದ.
ಅನುಮಾನಗೊಮ್ದ ಪೊಲೀಸರು ಆರೋಪಿ ಉಮಾಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ತಾನೇ ಪತ್ನಿಯನ್ನು ಕೊಂದು ಬಳಿಕ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ನಾಟಕ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.