
ಚಿತ್ರದುರ್ಗ: 60 ದಿನಗಳಲ್ಲಿ ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ವ್ಯಕ್ತಿಯೋರ್ವ ಕೋಟಿ ಕೋಟಿ ಹಣ ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಮೂಲದ ರೈಲ್ವೆ ನೌಕರ ರಮೇಶಪ್ಪ ಎಂಬುವವರಿಗೆ ಆಂಧ್ರ ಮೂಲದ ಕೋಡೆ ರಮಣಯ್ಯ ಎಂಬಾತ ಹಣ ಪಡೆದು ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ.
ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಕಂಪನಿ ಹೆಸರಲ್ಲಿ ರಮೇಶಪ್ಪ ಅವರಿಂದ ಹಣ ಪಡೆದ ಕೋಡೆರಮಣಯ್ಯ 60 ದಿನಗಳಲ್ಲಿ ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ವಂಚಕ ರಮೇಶಪ್ಪ ಅವರಿಂದ 1 ಲಕ್ಷ 4 ಸಾವಿರ ಹಣ ಪಡೆದಿದ್ದಾನೆ. ರಮೇಶಪ್ಪ ಸಂಬಂಧಿಕರು ಸೇರಿ 106 ಜನರಿಗೆ ಇದೇ ರೀತಿ ಹಣ ಪಡೆದು ಮೋಸ ಮಾಡಿದ್ದಾನೆ.
ಒಟ್ಟು 4.79 ಕೋಟಿ ಹಣವನ್ನು ವಂಚಿಸಿ ಆರೋಪಿ ಪರಾರಿಯಾಗಿದ್ದಾನೆ. ಹಣ ಕಳೆದುಕೊಂಡಿರುವ ರಮೇಶಪ್ಪ ಚಿತ್ರದುರ್ಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.