ಚಿತ್ರದುರ್ಗ ನಗರದ ವ್ಯಾಪ್ತಿಯ ಸಾರ್ವಜನಿಕರು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಂಡು ನಾಮಫಲಕ ಅಳವಡಿಸಿಕೊಳ್ಳಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.
ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶಗಳನ್ನು ಸ್ವಚ್ಚಗೊಳಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಸ್ವಚ್ಚಗೊಳಿಸಿದ ನಿವೇಶನಗಳಲ್ಲಿ ಕಳೆದ ತಿಂಗಳು ಸುರಿದ ಮಳೆಗೆ ಮತ್ತೆ ಗಿಡ ಗಂಟೆಗಳು ಬೆಳೆದಿದ್ದು, ವಿಷಜಂತುಗಳು ಕಾಣಿಸುತ್ತಿರುವ ಬಗ್ಗೆ ಸಾರ್ವಜನಿಕರು ನಗರಸಭೆಗೆ ಮೌಖಿಕವಾಗಿ ದೂರು ನೀಡುತ್ತಿದ್ದಾರೆ. ನಿವೇಶನದ ಮಾಲೀಕರ ಮಾಹಿತಿ ಲಭ್ಯವಿದ್ದವರಿಗೆ ನಗರಸಭೆಯಿಂದ ನೋಟೀಸ್ ನೀಡಿ ಸ್ವಚ್ಛಗೊಳಿಸಲು ತಿಳಿಸಲಾಗಿರುತ್ತದೆ. ಇನ್ನೂ ಕೆಲವು ನಿವೇಶನಗಳ ಮಾಲೀಕರ ವಿವರ ದೊರೆತಿರುವುದಿಲ್ಲ.
ಆದ್ದರಿಂದ ಸಾರ್ವಜನಿಕರು ತಮ್ಮ ನಿವೇಶನಗಳನ್ನು ಸ್ವಚ್ಚಗೊಳಿಸಿಕೊಂಡು ಕಾಂಪೌಡ್ ನಿರ್ಮಾಣ ಮಾಡಿಕೊಳ್ಳುವುದು ಹಾಗೂ ನಿವೇಶನಕ್ಕೆ ಸಂಬAಧಪಟ್ಟ ಮಾಲೀಕರ ಹೆಸರು, ವಿಳಾಸ, ಖಾತೆ ಅಥವಾ ಅಸೆಸ್‌ಮೆಂಟ್ ಸಂಖ್ಯೆ, ಪಿ.ಐ.ಡಿ ನಂ, ಮೊಬೈಲ್ ನಂಬರ್‌ಗಳನ್ನೊಳಗೊAಡ ನಾಮಫಲಕ ಹಾಕಿಕೊಳ್ಳುವಂತೆ ಕೋರಿದ್ದಾರೆ.
ಒಂದು ವೇಳೆ ನಿವೇಶನಗಳನ್ನು ಸ್ವಚ್ಚಗೊಳಿಸದಿದ್ದಲ್ಲಿ ನಗರಸಭೆಯಿಂದ ಸ್ವಚ್ಚಗೊಳಿಸಿ, ಸ್ವಚ್ಚಗೊಳಿಸಲು ತಗಲುವ ವೆಚ್ಚದ ಎರಡುಪಟ್ಟು ಮೊತ್ತವನ್ನು ದಂಡ ವಿಧಿಸಿ ವಸೂಲಿ ಮಾಡಲಾಗುವುದು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.