
ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಿದ್ದಾರೆ. ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಅಜ್ಜ-ಅಜ್ಜಿಯರಾಗಿದ್ದು, ರಾಮ್ ಚರಣ್ ಹೆಣ್ಣುಮಗುವಿನ ತಂದೆಯಾಗಿದ್ದಾರೆ.
ನಟ ರಾಮ್ ಚರಣ್ ಪತ್ನಿ ಉಪಾಸನಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಮುಂಜಾನೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಸುಂದರವಾದ ಹೆಣ್ಣು ಮಗುವಿಗೆ ಉಪಾಸನಾ ಜನ್ಮ ನೀಡಿದ್ದಾರೆ. ಚಿರಂಜೀವಿ ತಮ್ಮ ಟ್ವಿಟ್ಟರ್ ನಲ್ಲಿ ಈ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.
“ಸುಸ್ವಾಗತ ಲಿಟಲ್ ಮೆಗಾ ಪ್ರಿನ್ಸೆಸ್ !! ನಿಮ್ಮ ಆಗಮನ ಮೆಗಾ ಫ್ಯಾಮಿಲಿಯಲ್ಲಿ ಸಂತಸ ತಂದಿದೆ ಎಂದಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ಪ್ರಕಾರ ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಮದುವೆಯಾದ 11 ವರ್ಷದ ಬಳಿಕ ರಾಮ್ ಚರಣ್ ಮತ್ತು ಉಪಾಸನಾ ಮೊದಲ ಮಗುವಿಗೆ ಪೋಷಕರಾಗಿದ್ದು ಕುಟುಂಬದಲ್ಲಿ ಹೆಚ್ಚಿನ ಸಂತಸ ಮನೆಮಾಡಿದೆ.