
ಪಾಟ್ನಾ: ಬಿಹಾರದ ಉಜಿಯಾರ್ ಪುರದಲ್ಲಿ ಚಿರಾಗ್ ಪಾಸ್ವಾನ್ ಅವರ ಹೆಲಿಕಾಪ್ಟರ್ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದೆ.
ಬಿಹಾರದ ಉಜಿಯಾರ್‌ಪುರ ಲೋಕಸಭಾ ಕ್ಷೇತ್ರದ ಮೊಹದ್ದಿ ನಗರದ ಹೆಲಿಪ್ಯಾಡ್ ಬಳಿ ಲೋಕ ಜನಶಕ್ತಿ ಪಕ್ಷದ(ಎಲ್‌ಜೆಪಿ) ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಯದಲ್ಲಿ ಚಕ್ರಗಳು ನೆಲದಲ್ಲಿ ಸಿಕ್ಕಿಕೊಂಡಿವೆ.
ಹೆಲಿಕಾಪ್ಟರ್ ನಿಗದಿತ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿದ್ದಾಗ ಈ ಆತಂಕಕಾರಿ ಘಟನೆ ಸಂಭವಿಸಿದೆ. ಹೆಲಿಕಾಪ್ಟರ್ ಗಾಲಿಗಳು ನೆಲದಲ್ಲಿ ಹುದುಗಿವೆ. ಇದರಿಂದಾಗಿ ಕೆಲ ಕಾಲ ಆತಂಕ ಉಂಟಾಗಿತ್ತು. ಸಂಭಾವ್ಯ ಕುಸಿತದಿಂದ ಹೆಲಿಕಾಪ್ಟರ್ ಸ್ವಲ್ಪಮಟ್ಟಿಗೆ ಪಾರಾಗಿದೆ. ಅದೃಷ್ಟವಶಾತ್, ಯಾವುದೇ ಅಪಾಯವಾಗಿಲ್ಲ. ಪಾಸ್ವಾನ್ ಮತ್ತು ಅವರ ತಂಡವು ಸುರಕ್ಷಿತವಾಗಿದೆ.