alex Certify ಪಕ್ಕೆಲುಬು ಮುರಿಯುವಂತೆ ಅಪ್ಪಿಕೊಂಡವನಿಗೆ ಬಿತ್ತು ಭಾರಿ ದಂಡ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಕೆಲುಬು ಮುರಿಯುವಂತೆ ಅಪ್ಪಿಕೊಂಡವನಿಗೆ ಬಿತ್ತು ಭಾರಿ ದಂಡ…!

ತಬ್ಬಿಕೊಳ್ಳುವುದು ಜನರೊಂದಿಗೆ ಬಾಂಧವ್ಯಕ್ಕೆ ನಿಜವಾಗಿಯೂ ಉತ್ತಮ ಮಾರ್ಗ, ಆದರೆ, ತಬ್ಬಿಕೊಂಡು ಆಸ್ಪತ್ರೆಗೆ ಸೇರುವಂತಾದರೆ ? ಚೈನಾದಲ್ಲಿ ಹೀಗೊಂದು ಸ್ವಾರಸ್ಯಕರ ಟನೆ ನಡೆದಿದೆ. ಸಹೋದ್ಯೋಗಿಯ ಅಪ್ಪುಗೆಯಿಂದ ಮಹಿಳೆ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್​ಗೆ ಸೇರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬೆಳವಣಿಗೆ ಮುಂದುವರಿದ ಭಾಗವಾಗಿ ಆ ಮಹಿಳೆ ತನ್ನ ಸಹೋದ್ಯೋಗಿಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ, ಆತ ಅವಳನ್ನು ತುಂಬಾ ಬಲವಾಗಿ ತಬ್ಬಿಕೊಂಡು ಪಕ್ಕೆಲುಬುಗಳನ್ನು ಮುರಿದಿದ್ದಾನೆ ಎಂಬುದು ದೂರಿನ ಸಾರಾಂಶವಾಗಿದೆ.

ಈ ಘಟನೆಯು ಮೇ 2021ರಲ್ಲಿ ಯುಯಾಂಗ್​ ನಗರದಲ್ಲಿನ ತನ್ನ ಕೆಲಸದ ಸ್ಥಳದಲ್ಲಿ ಮಹಿಳೆಯು ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದಾಗ ಸಂಭವಿಸಿದೆ.

ಸಂಭಾಷಣೆಯ ನಡುವೆ ಪುರುಷ ಸಹೋದ್ಯೋಗಿ ಮಹಿಳೆಯ ಬಳಿಗೆ ಬಂದು ಬಿಗಿಯಾಗಿ ತಬ್ಬಿಕೊಂಡಿದ್ದು, ಅದು ಅವಳನ್ನು ನೋವಿನಿಂದ ಕಿರುಚುವಂತೆ ಮಾಡಿದೆ. ಕೆಲಸ ಬಿಟ್ಟ ನಂತರ ಎದೆನೋವು ಅನುಭವಿಸಿದ್ದಾಳೆ.

ಒಂದು ವಾರದ ನಂತರ ಅವಳು ಇನ್ನೂ ತೀವ್ರವಾದ ನೋವನ್ನು ಅನುಭವಿಸಿ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಮೂರು ಪಕ್ಕೆಲುಬು ಮುರಿದಿರುವುದು ಎಕ್ಸ್​-ರೇಯಿಂದ ಬಹಿರಂಗವಾಗಿದೆ. ಚಿಕಿತ್ಸೆಗಾಗಿ ಸಾಕಷ್ಟು ಹಣ ವೆಚ್ಚ ಮಾಡಿದ ಬಳಿಕ ಮೂಳೆ ಮುರಿದ ಸಹೋದ್ಯೋಗಿಯನ್ನು ಭೇಟಿಯಾಗಿ ಮಾತುಕತೆ ನಡೆಸಲು ಪ್ರಯತ್ನಿಸಿದರು ಆದರೆ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ.

ತನ್ನ ಸ್ನೇಹಪೂರ್ವಕ ಅಪ್ಪುಗೆಯಿಂದ ಮೂಳೆ ಮುರಿಯಿತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆತ ಹೇಳಿಕೊಂಡ ನಂತರ, ಮಹಿಳೆ ಅಂತಿಮವಾಗಿ ಮೊಕದ್ದಮೆ ಹೂಡಿ, ಆರ್ಥಿಕ ನಷ್ಟಕ್ಕೆ ಪರಿಹಾರವನ್ನು ಕೇಳಿದ್ದಳು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆ ಮಹಿಳೆಯ ಮುರಿದ ಪಕ್ಕೆಲುಬುಗಳು ಇತರ ದೈಹಿಕ ಚಟುವಟಿಕೆಗಳಿಂದ ಉಂಟಾಗಿದೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂಬ ಆಧಾರದ ಮೇಲೆ ಸಹೋದ್ಯೋಗಿ ಮಹಿಳೆಗೆ 10,000 ಯುವಾನ್​ ಪರಿಹಾರವಾಗಿ ಪಾವತಿಸಲು ಕೋರ್ಟ್​ ಆದೇಶಿಸಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...