ದಕ್ಷಿಣ ಚೀನಾದ ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ಉಡುಗೊರೆಯಾಗಿ ನೀಡಿದ ಬ್ಯಾಗ್‌ಗಳೆಲ್ಲವೂ ನಕಲಿ ಡಿಸೈನರ್ ಬ್ಯಾಗ್‌ಗಳು ಎಂದು ತಿಳಿದ ನಂತರ ಬೇಸರ ವ್ಯಕ್ತಪಡಿಸಿದ್ದಾಳೆ. ತನ್ನ ಬಾಯ್ ಫ್ರೆಂಡ್ ತನ್ನ ನಕಲಿ ಹ್ಯಾಂಡ್ ಬ್ಯಾಗ್ ಗಳನ್ನು ತಂದಿದ್ದು, ಅದು ನಿಜವೆಂದು ಭಾವಿಸಿ ಇದೀಗ ತನ್ನ ಮೇಲೆ ಆರೋಪ ಮಾಡುತ್ತಿದ್ದಾನೆ ಎಂದು ವಿವರಿಸಿದ್ದಾಳೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ ಯುವತಿ, ತನ್ನ ಬಾಯ್‌ಫ್ರೆಂಡ್ ತನಗೆ ಸಾಕಷ್ಟು ಐಷಾರಾಮಿ ಡಿಸೈನರ್ ಬ್ಯಾಗ್‌ಗಳನ್ನು ತಂದಿದ್ದರಿಂದ ಆತ ಒಳ್ಳೆಯವನೆಂಬ ಭಾವನೆ ಮೂಡಿಸಿದ್ದ. ಅವುಗಳನ್ನು ಇಡಲು ಕೋಣೆಯಲ್ಲಿ ಹೆಚ್ಚು ಸ್ಥಳಾವಕಾಶವಿಲ್ಲದ ಕಾರಣ, ಕೆಲವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಳೆ. ಈ ಡಿಸೈನರ್ ಬ್ಯಾಗ್‌ಗಳು ಸುಲಭವಾಗಿ ಮಾರಾಟವಾಗಬಹುದು ಎಂದೇ ಅವಳು ಭಾವಿಸಿದ್ದಳು. ಆದರೆ, ಅವುಗಳನ್ನು ಮಾರಾಟ ಮಾಡಲು ಮುಂದಾದಾಗ, ಅವಳಿಗೆ ಉಡುಗೊರೆಯಾಗಿ ನೀಡಿದ ಎಲ್ಲಾ ಬ್ಯಾಗ್ ಗಳು ನಕಲಿ ಎಂಬುದು ತಿಳಿದು ಬಂದಿದೆ.
ಬ್ಯಾಗ್ ಗಳು ಅಸಲಿಯಲ್ಲ ನಕಲಿ ಎಂದು ತಿಳಿದು ಬಹಳ ಬೇಸರಗೊಂಡಿದ್ದಾಳೆ. ನಕಲಿ ಡಿಸೈನರ್ ಬ್ಯಾಗ್‌ಗಳ ಬಗ್ಗೆ ಗೆಳೆಯನಲ್ಲಿ ಕೇಳಿದಾಗ, ಆತ ಆಕೆಯನ್ನೇ ದಬಾಯಿಸಿದ್ದಾನಂತೆ. ತಾನು ಕೊಟ್ಟ ಉಡುಗೊರೆಗಳನ್ನು ಏಕೆ ಮಾರುತ್ತಿದ್ದೀಯ ಎಂದು ಜಗಳವಾಡಿದ್ದಾನಂತೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ ಯುವತಿ, ತಾನು ಬ್ಯಾಗ್ ಗಳನ್ನು ಮಾರಾಟಕ್ಕೆ ಇಟ್ಟಿದ್ರಿಂದ ಇದು ನಕಲಿ ಅನ್ನೋ ವಿಚಾರ ತಿಳಿಯುವಂತಾಯಿತು ಎಂದು ಹೇಳಿದ್ದಾಳೆ. ಈ ಸಂಬಂಧವು ಕೇವಲ ಹಣದ ಮೇಲೆ ಆಧಾರಿತವಾಗಿದೆ ಎಂದು ಕೆಲವು ಬಳಕೆದಾರರು ಹೇಳಿದ್ರೆ, ಇನ್ನೂ ಕೆಲವರು ಆಕೆಯ ಗೆಳೆಯನನ್ನು ದೂಷಿಸಿದ್ದಾರೆ.