alex Certify BIG NEWS: `ಪೂರ್ವ ಲಡಾಖ್ ನಲ್ಲಿ ಚೀನಾ ಸೈನಿಕರ ಹೆಚ್ಚಳ’: ಇದು ಆತಂಕದ ವಿಷ್ಯವೆಂದ ಸೇನಾ ಮುಖ್ಯಸ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: `ಪೂರ್ವ ಲಡಾಖ್ ನಲ್ಲಿ ಚೀನಾ ಸೈನಿಕರ ಹೆಚ್ಚಳ’: ಇದು ಆತಂಕದ ವಿಷ್ಯವೆಂದ ಸೇನಾ ಮುಖ್ಯಸ್ಥ

ಪೂರ್ವ ಲಡಾಖ್ ಪ್ರದೇಶದಲ್ಲಿ ಕಳೆದ ವರ್ಷ ಆರಂಭವಾದ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಕಡಿಮೆಯಾಗುವಂತೆ ಕಾಣ್ತಿಲ್ಲ. ಚೀನಾ ಭಾರತವನ್ನು ಕೆಣಕುವ ಪ್ರಯತ್ನ ಮುಂದುವರೆಸಿದೆ. ಚೀನಾ ನಿರಂತರವಾಗಿ ಪ್ರಚೋದನಕಾರಿ ಕೃತ್ಯಗಳನ್ನು ಮಾಡುತ್ತಿದೆ. ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ. ನರವನೆ, ಶನಿವಾರ ಮಹತ್ವದ ಹೇಳಿಕೆ ನೀಡಿದ್ದಾರೆ.

ಎರಡು ದಿನಗಳ ಭೇಟಿಗಾಗಿ ಲಡಾಖ್‌ನಲ್ಲಿರುವ ನರವನೆ, ಚೀನಾದ ಸೈನಿಕರು, ಭಾರತದ ಪೂರ್ವ ಕಮಾಂಡ್, ಪೂರ್ವ ಲಡಾಖ್ ಮತ್ತು ಉತ್ತರದ ಮುಂಭಾಗದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದಾರೆ. ಇದು ಚಿಂತಿಸುವ ವಿಷ್ಯವೆಂದು ನರವನೆ ಎಚ್ಚರಿಕೆ ನೀಡಿದ್ದಾರೆ. ಪಿಎಲ್‌ಎ ನಿಯೋಜನೆಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ಉಭಯ ದೇಶಗಳ ನಡುವೆ ಗಡಿ ಒಪ್ಪಂದವಾಗುವವರೆಗೂ ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಘಟನೆಗಳು ನಡೆಯುತ್ತಲೇ ಇರುತ್ತವೆ. ಕಳೆದ ಒಂದು ವರ್ಷದಿಂದ ಚೀನಾದೊಂದಿಗೆ ಮಾತುಕತೆ ನಡೆಯುತ್ತಿದ್ದು, ಮಾತುಕತೆಯ ಮೂಲಕ ಮಾತ್ರ ಉಭಯ ದೇಶಗಳ ನಡುವೆ ನಡೆಯುತ್ತಿರುವ ವಿವಾದವನ್ನು ಬಗೆಹರಿಸಬಹುದು ಎಂದವರು ಹೇಳಿದ್ದಾರೆ.

ಫೆಬ್ರವರಿಯಿಂದ ಜೂನ್ ಅಂತ್ಯದವರೆಗೆ ಪಾಕಿಸ್ತಾನದ ಸೇನೆಯಿಂದ ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ. ಆದರೆ ಇತ್ತೀಚೆಗೆ ಒಳನುಸುಳುವಿಕೆ ಪ್ರಯತ್ನಗಳು ತೀವ್ರಗೊಂಡಿವೆ ಎಂದು ಸೇನಾ ಮುಖ್ಯಸ್ಥ ನರವನೆ ಹೇಳಿದ್ದಾರೆ. ಕಳೆದ 10 ದಿನಗಳಲ್ಲಿ ಎರಡು ಬಾರಿ ಕದನ ವಿರಾಮವನ್ನು ಉಲ್ಲಂಘಿಸಲಾಗಿದೆ. ಫೆಬ್ರವರಿ ಮೊದಲು ಪರಿಸ್ಥಿತಿ ಮತ್ತೆ ನಿರ್ಮಾಣವಾಗುತ್ತಿದೆ. ಆದಾಗ್ಯೂ, ಭಾರತೀಯ ಸೇನೆಯು ಪ್ರತಿ ಸವಾಲಿಗೆ ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...