ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕಾರಣವಾಗುವ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದಾಗ ಮಕ್ಕಳು ಸಾಮಾನ್ಯವಾಗಿ ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅಂಥದ್ದೇ ಒಂದು ಘಟನೆ ಚೀನಾದಲ್ಲಿ ನಡೆದಿದೆ. ಬಾಲಕಿಯೊಬ್ಬಳು 3 ಕೆ,ಜಿ ಕೂದಲನ್ನು ತಿಂದು ತೊಂದರೆಗೆ ಸಿಲುಕಿರುವ ಘಟನೆ ನಡೆದಿದೆ.
ಅಸ್ವಸ್ಥತೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದಾಗ ಇಟ್ಟಿಗೆಯ ತೂಕದ ಕೂದಲು ಉಂಡೆಯನ್ನು ಶಸ್ತ್ರಚಿಕಿತ್ಸಕರು ತೆಗೆದುಹಾಕಿದ್ದಾರೆ. ಈಕೆ ತಲೆಗೂದಲನ್ನು ಹೇಗೆ ತಿನ್ನುತ್ತಿದ್ದಳು ಎಂದರೆ ತಲೆ ಕೂಡ ಬೋಳಾಗಿತ್ತು ಎನ್ನಲಾಗಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಉಲ್ಲೇಖಿಸಿದಂತೆ 14 ವರ್ಷದ ಬಾಲಕಿ ಇಂಥದ್ದೊಂದು ಕ್ರಮ ತೆಗೆದುಕೊಂಡಿದ್ದಾಳೆ. ಚೀನಾದ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್‌ಗೆ ಸೇರಿದ ಈ ಬಾಲಕಿ ಶಸ್ತ್ರಚಿಕಿತ್ಸೆಯ ಬಳಿಕ ಆರೋಗ್ಯವಾಗಿದ್ದಾಳೆ ಎಂದು ಆಕೆಯ ಚಿಕಿತ್ಸೆಯ ಉಸ್ತುವಾರಿ ವಹಿಸಿದ್ದ ಕ್ಸಿಯಾನ್ ಡಾಕ್ಸಿಂಗ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಶಿ ಹೈ ಹೇಳಿದರು. ಕೂದಲಿನಿಂದ ಹೊಟ್ಟೆ ಎಷ್ಟು ಕಟ್ಟಿಹೋಗಿತ್ತು ಎಂದರೆ ಬೇರೆ ಆಹಾರ ಸೇವನೆಗೆ ಹೊಟ್ಟೆಯೊಳಕ್ಕೆ ಜಾಗವೇ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.