ಮಕ್ಕಳು ಎಂದ ಮೇಲೆ ಏನಾದರೊಂದು ಹೊಸ ತರಹದ ತಲೆಹರಟೆಗಳನ್ನು ಮಾಡುತ್ತಲೇ ಇರುತ್ತಾರೆ. ದೊಡ್ಡವರು ಹೇಳಿದ ಮಾತು ಕೇಳಲ್ಲ. ಅವರ ಮನಬಂದಂತೆ ವರ್ತಿಸುತ್ತಾರೆ. ಶಾಲೆಯಲ್ಲೂ ಕೂಡ ಟೀಚರ್‌ಗಳು ಹೇಳಿದ್ದನ್ನು 100% ಪಾಲಿಸದ ಮಕ್ಕಳು ಇರುವುದು ಸಾಮಾನ್ಯ ಸಂಗತಿ. ಏಕೆಂದರೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬೆಳೆಯುವ ಪೈರುಗಳಿದ್ದಂತೆ, ಜೀವನಾಸಕ್ತಿ ಹೆಚ್ಚು. ಎಲ್ಲವೂ ಹೊಸದಾಗಿ ಕಾಣುತ್ತಿರುತ್ತದೆ, ಗಮನ ಆಗಾಗ್ಗೆ ಬೇರೆಡೆ ಹೊಯ್ದಾಡುತ್ತಿರುತ್ತದೆ.
ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಹಬ್ಬಕ್ಕೂ ಮುನ್ನ ಭರ್ಜರಿ ʼಬಂಪರ್ʼ ಕೊಡುಗೆ
ಇದೇ ರೀತಿ ಚೀನಾದ ಸಿಶುಯಾನ್ ಪ್ರಾಂತ್ಯದಲ್ಲಿನ ಪ್ರೌಢಶಾಲೆಯೊಂದರಲ್ಲಿ ಕುರುಕುಲು ತಿಂಡಿಗಳನ್ನು ವಿದ್ಯಾರ್ಥಿನಿಯೊಬ್ಬಳು ಅಡಗಿಸಿ ಇಟ್ಟಿದ್ದನ್ನು ಟೀಚರ್ ಪತ್ತೆ ಮಾಡಿದ್ದಾರೆ. ಕೋಪಗೊಂಡ ಅವರು 14 ವರ್ಷದ ವಿದ್ಯಾರ್ಥಿನಿಗೆ 300 ಬಾರಿ ಬಸ್ಕಿ ಹೊಡೆಯುವಂತೆ ಖಡಕ್ ಆದೇಶದ ಮೂಲಕ ಕಠಿಣ ಶಿಕ್ಷೆ ಕೊಟ್ಟಿದ್ದಾರೆ. ಬಸಕಿ ಹೊಡೆಯುವದರ ಮೇಲೆ ನಿಗಾ ಇರಿಸಲು ಕೂಡ ಶಾಲಾ ಸಿಬ್ಬಂದಿಯನ್ನು ನೇಮಿಸಿ ಟೀಚರ್ ಹೊರನಡೆದಿದ್ದಾರೆ.
ಪಾಪ, ಹುಡುಗಿ 150 ಬಸಕಿ ಹೊಡೆಯುವಷ್ಟರಲ್ಲೇ ಪೂರ್ಣ ಸುಸ್ತಾಗಿ ಕುಸಿದು ಬಿದ್ದಿದ್ದಾಳೆ. ಇದಕ್ಕೂ ಮುನ್ನ , ಅಂದರೆ ಕಳೆದ ವರ್ಷ ಏಪ್ರಿಲ್‌ನಲ್ಲಿ ವಿದ್ಯಾರ್ಥಿನಿಗೆ ಕಾಲಿಗೆ ಭಾರಿ ಪೆಟ್ಟಾಗಿ, ಚಿಕಿತ್ಸೆ ಪಡೆದಿದ್ದಳು. ಆಕೆಯ ಕಾಲಿನ ನರಗಳು ದುರ್ಬಲವಾಗಿದ್ದವು. ಇದು ತಿಳಿದಿದ್ದರೂ ಶಾಲೆಯಲ್ಲಿ ಯಾವ ಟೀಚರ್, ಸಹಪಾಠಿಗಳು ಕೂಡ ವಿದ್ಯಾರ್ಥಿನಿಯ ನೆರವಿಗೆ ಧಾವಿಸಲಿಲ್ಲ.
ಸ್ನೇಹಿತರೊಂದಿಗೆ ಸೇರಿ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಹೊಡೆದು ಕೊಂದ ಕಿಡಿಗೇಡಿ
ಕೊನೆಗೆ ಪೋಷಕರಿಗೆ ವಿಷಯ ಮುಟ್ಟಿದಾಗ , ಅವರು ಶಾಲೆಗೆ ದೌಡಾಯಿಸಿ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಪಾಸಣೆ ನಡೆದಿದ ವೈದ್ಯರು, ಮಗಳ ಕಾಲು ಪೂರ್ಣ ವಿಕಲಗೊಂಡಿದ್ದು ನರಗಳ ಮೇಲಿನ ಭಾರಿ ಒತ್ತಡದಿಂದ ಆಕೆ ವಿಕಲಾಂಗಳಾಗಿಯೇ ಉಳಿಯುತ್ತಾಳೆ ಎಂದಿದ್ದಾರೆ.
ಶಾಲೆ ಮತ್ತು ಟೀಚರ್‌ಗಳ ಬೇಜವಾಬ್ದಾರಿತನ ಮತ್ತು ಕಠಿಣ ಶಿಕ್ಷೆ ನೀಡಿದ್ದಕ್ಕಾಗಿ ಆಕ್ರೋಶಗೊಂಡ ಪೋಷಕರು ಶಾಲೆಯ ವಿರುದ್ಧ ಪೊಲೀಸರಿಗೆ ದೂರು ನೀಡಿ ಕೋರ್ಟ್‌ಗೂ ಹೋಗಿದ್ದಾರೆ. ವಿದ್ಯಾರ್ಥಿನಿ ಜೀವನ ಹಾಳು ಮಾಡಿದ ಶಾಲೆಗೆ ಕೋರ್ಟ್ ಮತ್ತು ಶಿಕ್ಷಣ ಇಲಾಖೆ 13 ಲಕ್ಷ ರೂ. ದಂಡ ವಿಧಿಸಿದೆ. ಆ ಮೊತ್ತವನ್ನು ಪೋಷಕರಿಗೆ ನೀಡಲು ಹೋದಾಗ, ಅವರು ಅದನ್ನು ಮುಟ್ಟದೆಯೇ ವಾಪಸು ಮಾಡಿದ್ದಾರೆ.