ಚೀನಾದ ವಿದ್ಯಾರ್ಥಿಗಳು ಅದೃಶ್ಯ ಹೊದಿಕೆಯನ್ನು ರಚಿಸಿದ್ದಾರೆ. ವುಹಾನ್ ವಿಶ್ವವಿದ್ಯಾನಿಲಯದ ನಾಲ್ಕು ಪದವೀಧರ ವಿದ್ಯಾರ್ಥಿಗಳು ಈ ಕಡಿಮೆ-ವೆಚ್ಚದ “ಇನ್ವಿಸಿಬಿಲಿಟಿ ಕ್ಲೋಕ್” ಅನ್ನು ಕಂಡುಹಿಡಿದಿದ್ದಾರೆ, ಅದನ್ನು ಅವರು ಇನ್ವಿಸಿಡಿಫೆನ್ಸ್ ಕೋಟ್ ಎಂದು ಕರೆಯುತ್ತಾರೆ.
ಇದು ಕೃತಕ ಬುದ್ಧಿಮತ್ತೆ ಮಾನಿಟರ್ಡ್ ಭದ್ರತಾ ಕ್ಯಾಮೆರಾಗಳಿಂದ ಮಾನವ ದೇಹವನ್ನು ಮರೆಮಾಡಲು ಉದ್ದೇಶಿಸಲಾಗಿದೆ. ಆ ಮೂಲಕ ಅದನ್ನು ಧರಿಸಿದ ವ್ಯಕ್ತಿಯ ಗುರುತು ಮರೆಮಾಚುತ್ತದೆ.
ಲಾಕ್ಡೌನ್ ವಿರೋಧಿ ಪ್ರತಿಭಟನೆಗಳ ಬಳಿಕ ದೇಶವು ವಿಶ್ವದ ಕೆಲವು ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿದೆ. ಭಿನ್ನಮತೀಯರು, ಜನಾಂಗೀಯ ಅಲ್ಪಸಂಖ್ಯಾತರು ಮತ್ತು ವಲಸೆ ಕಾರ್ಮಿಕರನ್ನು ಪತ್ತೆಹಚ್ಚಲು ಪೊಲೀಸರು ಇದನ್ನು ಬಳಸುತ್ತಾರೆ. ಇತ್ತೀಚಿನ ಪ್ರತಿಭಟನೆಯ ಸಂದರ್ಭದಲ್ಲಿ, ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಿ ಹಲವರನ್ನು ಬಂಧಿಸಲಾಗಿದೆ. ಇದಕ್ಕೆ ಸವಾಲು ಎನ್ನುವಂತೆ ಈ ಕೋಟ್ ತಯಾರು ಮಾಡಲಾಗಿದೆ !
ಪ್ರೊಫೆಸರ್ ವಾಂಗ್ ಝೆಂಗ್ ಯೋಜನೆಯ ನೇತೃತ್ವ ವಹಿಸಿದ್ದರು. ಪ್ರಾಥಮಿಕ ಪ್ರಯೋಗಗಳ ಸಮಯದಲ್ಲಿ, ವಿದ್ಯಾರ್ಥಿಗಳು ಅದನ್ನು ಕ್ಯಾಂಪಸ್ನ ಸುತ್ತಲೂ, ಅಲ್ಲಿ ಲಭ್ಯವಿರುವ ಭದ್ರತಾ ಕ್ಯಾಮೆರಾಗಳಲ್ಲಿ ಪರೀಕ್ಷಿಸಿದ್ದರು. ಗುರುತಿಸುವಿಕೆಯಿಂದ ತಪ್ಪಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಮಾನವನ ಕಣ್ಣು ಮತ್ತು ಕ್ಯಾಮೆರಾಗಳೆರಡನ್ನೂ ಮೂರ್ಖರನ್ನಾಗಿಸುವ ಕೋಟ್ ಅನ್ನು ಅಭಿವೃದ್ಧಿಪಡಿಸುವುದನ್ನು ಸವಾಲಾಗಿ ತೆಗೆದುಕೊಂಡು ಇದನ್ನು ರಚಿಸಿದ್ದಾರೆ.