ಜಪಾನ್ ಮೇಲೆ ಚೀನಾದಿಂದ ಮಿಸೈಲ್ ದಾಳಿ ನಡೆಸಲಾಗಿದೆ. ಜಪಾನ್ ಸರ್ಕಾರದಿಂದ ದಾಳಿ ನಡೆಸಿರುವುದನ್ನು ಖಚಿತಪಡಿಸಲಾಗಿದೆ. ಜಪಾನ್ ಆರ್ಥಿಕ ವಲಯದ ಮೇಲೆ ಚೀನಾ ಮಿಸೈಲ್ ದಾಳಿ ನಡೆಸಿದೆ ಎಂದು ಜಪಾನ್‌ನ ರಕ್ಷಣಾ ಸಚಿವ ನೊಬುವೊ ಕಿಶಿ ಗುರುವಾರ ಹೇಳಿದ್ದಾರೆ.
ಚೀನಾದಿಂದ ಉಡಾಯಿಸಲಾಗಿದ್ದ ಐದು ಬ್ಯಾಲಿಸ್ಟಿಕ್ ಕ್ಷಿಪಣಿಗಳು ದೇಶದ ವಿಶೇಷ ಆರ್ಥಿಕ ವಲಯದಲ್ಲಿ ಬಂದಿಳಿದಿವೆ. ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ನಮ್ಮ ನಾಗರಿಕರ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆ ಎಂದು ಜಪಾನ್ ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ನೊಬುವೊ ಕಿಶಿ ಹೇಳಿದ್ದಾರೆ.
ಚೀನಾ ಉಡಾವಣೆ ಮಾಡಿದ ಒಂಬತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಐದು ಜಪಾನ್‌ನ ಇ.ಇ.ಝಡ್.ನೊಳಗೆ ಬಂದಿಳಿದಿವೆ. ಬೀಜಿಂಗ್‌ನ ಕಟ್ಟುನಿಟ್ಟಿನ ಎಚ್ಚರಿಕೆಗಳ ಹೊರತಾಗಿಯೂ, ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಭೇಟಿಯ ನಂತರ ಚೀನಾ -ತೈವಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೃಹತ್ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಈ ಬೆಳವಣಿಗೆ ನಡೆದಿದೆ.
ಚೀನಾ ತೈವಾನ್ ಅನ್ನು ತನ್ನ ಪ್ರದೇಶವೆಂದು ಪರಿಗಣಿಸಿದ್ದು, ಅಗತ್ಯವಿದ್ದರೆ ಬಲವಂತವಾಗಿ ಒಂದು ದಿನ ವಶಪಡಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. ಜಪಾನ್‌ನ ದಕ್ಷಿಣದ ದ್ವೀಪ ಪ್ರದೇಶದ ಓಕಿನಾವಾ ಭಾಗಗಳು ತೈವಾನ್ ಗೆ ಸಮೀಪದಲ್ಲಿವೆ. ಜಪಾನ್ ಕರಾವಳಿಯಿಂದ 200 ನಾಟಿಕಲ್ ಮೈಲುಗಳವರೆಗೆ EEZ ವಿಸ್ತರಿಸಿದೆ.