ಚೀನಾದ ವ್ಯಕ್ತಿಯೊಬ್ಬ ಬರೋಬ್ಬರಿ 4,600 ಫೋನ್ಗಳನ್ನು ನಕಲಿ ಲೈವ್ಸ್ಟ್ರೀಮ್ ವೀಕ್ಷಣೆಗಾಗಿ ಬಳಸಿದ್ದಾನೆ. ಇದರಿಂದ ನಾಲ್ಕು ತಿಂಗಳೊಳಗೆ 3.5 ಕೋಟಿ ರೂ. ಆದಾಯ ಗಳಿಸಿದ್ದಾನೆ. ವಂಚನೆ ಹಿನ್ನೆಲೆಯಲ್ಲಿ ವ್ಯಕ್ತಿ ಈಗ ಜೈಲು ಪಾಲಾಗಿದ್ದಾನೆ.
ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ವಾಂಗ್ ಎಂಬ ವ್ಯಕ್ತಿಗೆ ಒಂದು ವರ್ಷ ಮತ್ತು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಹೆಚ್ಚುವರಿಯಾಗಿ “ಅಕ್ರಮ ವ್ಯಾಪಾರ ಕಾರ್ಯಾಚರಣೆಗಳ ಅಪರಾಧ” ಕ್ಕಾಗಿ 5.78 ಲಕ್ಷ ರೂ. ದಂಡ ವಿಧಿಸಲಾಗಿದೆ.
ವಾಂಗ್ 2022 ರಲ್ಲಿ ಲೈವ್ಸ್ಟ್ರೀಮ್ ವೀಕ್ಷಣೆಗಳನ್ನು ನಕಲಿ ಮಾಡುವುದನ್ನು ಕಲಿಯುತ್ತಾನೆ. ಇದರ ಜ್ಞಾನದಿಂದ ಕಾರ್ಯಕ್ರಮಗಳ ನೇರ ಪ್ರಸಾರದಲ್ಲಿ ಪ್ರೇಕ್ಷಕರ ವೀಕ್ಷಣೆ ಸಂಖ್ಯೆ, ಲೈಕ್ಸ್, ಕಾಮೆಂಟ್ಗಳು ಮತ್ತು ಹಂಚಿಕೆಗಳ ಸಂಖ್ಯೆಯನ್ನು ನಕಲಿ ಮಾಡಿದ್ದ.
ಇದಕ್ಕಾಗಿ 4, 600 ಫೋನ್ ಖರೀದಿಸಿ ವಿಶೇಷ ಸಾಫ್ಟ್ ವೇರ್ ಬಳಸಿ ಅವುಗಳನ್ನು ನಿಯಂತ್ರಿಸಿದ. ಹುನಾನ್ನ ಚಾಂಗ್ಶಾದಲ್ಲಿರುವ ಟೆಕ್ ಕಂಪನಿಯಿಂದ VPN ಸೇವೆಗಳು ಮತ್ತು ನೆಟ್ವರ್ಕಿಂಗ್ ನ ರೂಟರ್ಗಳು ಮತ್ತು ಸ್ವಿಚ್ಗಳನ್ನು ಖರೀದಿಸಿದ. ಇದರಲ್ಲಿ ಕೆಲವು ಕ್ಲಿಕ್ಗಳೊಂದಿಗೆ ವೀಕ್ಷಕರು ಮತ್ತು ಸಂವಹನಗಳನ್ನು ಹೆಚ್ಚಿಸಲು ಲೈವ್ಸ್ಟ್ರೀಮ್ನಲ್ಲಿ ಬಹು ಫೋನ್ಗಳನ್ನು ಸಕ್ರಿವಾಗುವಂತೆ ಮಾಡಬಹುದು.
ಲೈವ್ ಸ್ಟ್ರೀಮಿಂಗ್ ಗೆ ಬಳಸುವ ಒಂದು ಮೊಬೈಲ್ ಫೋನ್ನ ವೆಚ್ಚ ದಿನಕ್ಕೆ 77 ರೂ. ಎಂದು ವಾಂಗ್ ತಿಳಿಸಿದ್ದಾನೆ.
ವಾಂಗ್ ಗಳಿಸಿದ ಹಣವು ಲೈವ್ಸ್ಟ್ರೀಮ್ಗೆ ಫೋನ್ ಸಂಪರ್ಕಗೊಂಡಿರುವ ಸಮಯ ಮತ್ತು ಬಳಸಿರುವ ಫೋನ್ಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾನೆ. ಈ ರೀತಿ ತನ್ನ ಸೇವೆಗಳನ್ನು ಲೈವ್ಸ್ಟ್ರೀಮರ್ಗಳಿಗೆ ಮಾರಾಟ ಮಾಡುವ ಮೂಲಕ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 3.5 ಕೋಟಿ ರೂ. ಗಳಿಸಿದ್ದಾನೆ.