ಬಿಟ್ಟುಹೋದ ಗರ್ಲ್ ಫ್ರೆಂಡ್ ಮರಳಿ ಬರುವಂತೆ ಪ್ರೇಮಿಯೊಬ್ಬ ಬರೋಬ್ಬರಿ 21 ಗಂಟೆಗಳ ಕಾಲ ಮಂಡಿಯೂರಿ ಬೇಡಿಕೊಂಡಿದ್ದಾನೆ. ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ನಡೆದ ಈ ಘಟನೆ ಗಮನ ಸೆಳೆದಿದೆ.
ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿಯನ್ನು ತನ್ನ ಜೀವನಕ್ಕೆ ಮರಳುವಂತೆ 21 ಗಂಟೆಗಳ ಕಾಲ ಬೇಡಿಕೊಂಡಿದ್ದಾನೆ. ಮಾರ್ಚ್ 28 ರಂದು ಮಧ್ಯಾಹ್ನ 1 ಗಂಟೆಯಿಂದ ಮರುದಿನ ಬೆಳಿಗ್ಗೆ 10 ಗಂಟೆಯವರೆಗೆ ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದ ದಾಝೌನಲ್ಲಿ ಮಹಿಳೆಯ ಕಚೇರಿ ಕಟ್ಟಡದ ಪ್ರವೇಶ ದ್ವಾರದ ಹೊರಗೆ ವ್ಯಕ್ತಿ ಗುಲಾಬಿ ಹೂಗಳ ಗುಚ್ಛ ಹಿಡಿದು ಮಂಡಿಯೂರಿ ಕುಳಿತಿದ್ದಾನೆ.
ವರದಿ ಪ್ರಕಾರ ಅವನ ಸುತ್ತಲೂ ನೆರೆದ ಜನ ತನ್ನ ಪ್ರಯತ್ನಗಳನ್ನು ಬಿಡುವಂತೆ ವ್ಯಕ್ತಿಯನ್ನು ಒತ್ತಾಯಿಸಿದ್ದಾರೆ. ಆದರೆ ಆತ ಕೆಲವು ದಿನಗಳ ಹಿಂದೆ ತನ್ನ ಮಾಜಿ ಗೆಳತಿ ತನ್ನನ್ನು ಬಿಟ್ಟು ಹೋಗಿದ್ದಾಳೆ. ಆಕೆಯ ಬಳಿ ಕ್ಷಮೆ ಕೋರುತ್ತಿರುವುದಾಗಿ ಹೇಳಿದ್ದಾನೆ.
ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ತನ್ನ ಪ್ರಯತ್ನವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ. ಆದರೆ ಆತ ಅವರ ಸಲಹೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ಇಂತಹ ಪ್ರೀತಿಯ ವರ್ತನೆಯನ್ನು ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಅವನಿಂದ ದೂರವಿರಿ ಎಂದು ಮಾಜಿ ಗೆಳತಿಗೆ ಸಲಹೆ ನೀಡಿದ್ದಾರೆ.