ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ಚೀನಾದ ವ್ಯಕ್ತಿಯೊಬ್ಬ ಟಿಬೆಟ್‌ನಲ್ಲಿ ತನ್ನ ಮಂಚದ ಕೆಳಗೆ ಶವ ಕಂಡು ಆಘಾತಕ್ಕೊಳಗಾಗಿದ್ದ.
ಜಾಂಗ್ ಎಂಬ ವ್ಯಕ್ತಿ ಏಪ್ರಿಲ್ 21 ರಂದು ಲಾಸಾದಲ್ಲಿನ ತನ್ನ ಹೋಟೆಲ್‌ನಲ್ಲಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಪರಿಶೀಲಿಸಿದಾಗ ಶವ ಪತ್ತೆಯಾಗಿದೆ.
ಈ ಘಟನೆ ಬಳಿಕ ಕೊಲೆಯ ಬಗ್ಗೆ ತನಿಖೆ ನಡೆದಿದ್ದು ಶಂಕಿತನ ಬಂಧನವಾಗಿದೆ. ಮೂರು ಗಂಟೆಗಳ ಕಾಲ ಮಲಗಿದ್ದ ಹಾಸಿಗೆಯ ಕೆಳಗೆ ಮೃತದೇಹ ಪತ್ತೆಯಾಗಿದೆ. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರತಿಷ್ಠಿತ ಹೋಟೆಲ್ ಎಂದು ಕರೆಯಲ್ಪಡುವ ಗುಜಾಂಗ್ ಶುಹುವಾ ಇನ್‌ನಲ್ಲಿ ಜಾಂಗ್ ತಂಗಿದ್ದರು. ಹೋಟೆಲ್ ನಲ್ಲಿ ತಮ್ಮ ವಾಸ್ತವ್ಯದ ವಿಮರ್ಶೆಯನ್ನು ಆನ್‌ಲೈನ್‌ನಲ್ಲಿ ಅವರು ಹಂಚಿಕೊಂಡು ಪೋಸ್ಟ್ ಮಾಡಿದ್ದರು.
ಇದರ ಸ್ಕ್ರೀನ್ ಶಾಟ್ ತೆಗೆದು ಮತ್ತೊಬ್ಬರು ಪೋಸ್ಟ್ ಮಾಡಿದ ಮೇಲೆ ಬೆಚ್ಚಿಬೀಳಿಸುವ ಸುದ್ದಿ ಗೊತ್ತಾಗಿದೆ. ಆದರೆ ಜಾಂಗ್ ಅವರ ಪೋಸ್ಟ್ ನಿರಾಕರಿಸಿರುವ ಹೋಟೆಲ್, ಘಟನೆಯನ್ನು ಒಪ್ಪಿಕೊಂಡಿಲ್ಲ. ಆದರೆ ಪೊಲೀಸರು ಕೊಲೆ ಆರೋಪಿಯನ್ನ ಬಂಧಿಸಿರೋದು ಮತ್ತೊಂದು ವಿಡಿಯೋದಲ್ಲಿ ಗೊತ್ತಾಗಿದೆ.