
ಹೌದು, ಈ ಬಾರಿಯ ಪ್ಯಾರಿಸ್ ಒಲಂಪಿಕ್ಸ್ ನ ಜಿಮ್ನಾಸ್ಟಿಕ್ ವಿಭಾಗದಲ್ಲಿ ಚೀನಾದ Zhou Yoqin ಬೆಳ್ಳಿ ಪದಕ ಗೆದ್ದಿದ್ದು, ಕ್ರೀಡಾಕೂಟ ಮುಗಿದ ಬಳಿಕ ವಾಪಸ್ ತಮ್ಮ ದೇಶಕ್ಕೆ ತೆರಳಿದ್ದಾರೆ. ಸಹಜವಾಗಿಯೇ ಅವರಿಗೆ ಅಭಿನಂದನೆ ಸಿಕ್ಕಿದೆ. ಆದರೆ ಅವರ ವಿಡಿಯೋ ವೈರಲ್ ಆಗಿರುವುದು ಬೇರೆಯದ್ದೇ ಕಾರಣಕ್ಕೆ. ಈ ವಿಡಿಯೋ ಈಗ ಚೀನಾದ ಸಾಮಾಜಿಕ ಜಾಲತಾಣದ ಫ್ಲಾಟ್ ಫಾರ್ಮ್ ಗಳಲ್ಲಿ ಮಾತ್ರವಲ್ಲದೆ ವಿಶ್ವದ ಇತರ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲೂ ಹರಿದಾಡುತ್ತಿದೆ.
Zhou Yoqin ಪ್ಯಾರಿಸ್ ಒಲಂಪಿಕ್ಸ್ ನ ಜಿಮ್ನಾಸ್ಟಿಕ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ತಮ್ಮ ತಂದೆ – ತಾಯಿ ವಾಸಿಸುತ್ತಿರುವ ಊರಿಗೆ ತೆರಳಿದ್ದಾರೆ. ಅಲ್ಲಿ ಜೀವನ ನಿರ್ವಹಣೆಗಾಗಿ 18 ವರ್ಷದ Zhou Yoqin ಕುಟುಂಬ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದು, ಹೋದ ತಕ್ಷಣವೇ ತಮ್ಮ ತಂದೆ – ತಾಯಿಯ ನೆರವಿಗೆ ನಿಂತಿದ್ದಾರೆ. ರೆಸ್ಟೋರೆಂಟ್ ಗೆ ಆಗಮಿಸಿದ್ದ ಗ್ರಾಹಕರಿಗೆ Zhou Yoqin ಆಹಾರ ತಿನಿಸುಗಳನ್ನು ಸರ್ವ್ ಮಾಡುತ್ತಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ತಾನು ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದೇನೆ ಎಂಬ ಯಾವ ಹಮ್ಮು ಬಿಮ್ಮು ಇಲ್ಲದೆ ಈಕೆ ರೆಸ್ಟೋರೆಂಟ್ ನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಗರು Zhou Yoqin ‘ಡೌನ್ ಟು ಅರ್ಥ್’ ಎಂದು ಕೊಂಡಾಡುತ್ತಿದ್ದಾರೆ.