ಈ ವರ್ಷದ ಜುಲೈ ತಿಂಗಳಲ್ಲಿ ಉತ್ತೀರ್ಣರಾಗಿ ಕಾಲೇಜಿನಿಂದ ಹೊರ ಬಂದ ಸಹಪಾಠಿಗಳ ಗುಂಪೊಂದು ಅತ್ಯಂತ ವಿಶೇಷವಾಗಿ ತಮ್ಮ ಪದವಿ ದಿನದ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲು ಮುಂದಾಗಿದೆ ಎನ್ನುವುದರ ಬಗ್ಗೆ ಗ್ಲೋಬಲ್ ಟೈಮ್ಸ್ ನ್ಯೂಸ್ಪೇಪರ್ ವರದಿ ಮಾಡಿದೆ. ಈ ವಿದ್ಯಾರ್ಥಿಗಳು ತಮ್ಮ ಫೋಟೋವನ್ನು ಆಕಾಶದಲ್ಲಿ ಕ್ಯಾಮರಾ ಇಟ್ಟು ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಅಂದರೆ ವಿದ್ಯಾರ್ಥಿಗಳು ಇರುವ ಸ್ಥಳದಿಂದ ಸುಮಾರು 650 ಕಿಮೀ ಎತ್ತರದಲ್ಲಿರುವ ಕ್ಯಾಮರಾದಿಂದ ಫೋಟೋ ತೆಗೆಯುವ ಪ್ಲಾನ್ ಇದಾಗಿತ್ತು.
ಚೀನಾದ ಜಿಲಿನ್ ಪ್ರಾಂತ್ಯದ ಚಾಂಗ್ಚುನ್ ವಿಶ್ವವಿದ್ಯಾಲಯದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಕೆಂಪು ಹಾಗೂ ಹಳದಿ ಬಣ್ಣದ ಬೋರ್ಡ್ನ್ನು ತಲೆಯಲ್ಲಿ ಹಿಡಿದಿದ್ದರು. ಈ ಬೋರ್ಡ್ನ ಮೇಲೆ ಕಾಲೇಜಿನ ಹೆಸರನ್ನು ಬರೆಯಲಾಗಿತ್ತು. ಈ ರೀತಿಯ ವಿಶೇಷ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಕೈ ಹಾಕಿದ್ದರು.
BIG NEWS: `ಪೂರ್ವ ಲಡಾಖ್ ನಲ್ಲಿ ಚೀನಾ ಸೈನಿಕರ ಹೆಚ್ಚಳ’: ಇದು ಆತಂಕದ ವಿಷ್ಯವೆಂದ ಸೇನಾ ಮುಖ್ಯಸ್ಥ
ಸ್ಥಳೀಯ ಕಾಲಮಾನ ಬೆಳಗ್ಗೆ 9:45ರ ಸುಮಾರಿಗೆ ವಿಶ್ವವಿದ್ಯಾಲಯದ ಮೈದಾನದ ಬಳಿ ಹಾದು ಹೋದ ಜಿಲಿನ್ 1 ಸ್ಪೆಕ್ಟ್ರಮ್ 1 ಹಾಗೂ ಜಿಲಿನ್ 1 ವಿಡಿಯೋ 07 ಉಪಗ್ರಹವು ವಿದ್ಯಾರ್ಥಿಗಳ ಫೋಟೋ ಕ್ಲಿಕ್ಕಿಸಿದೆ. ಇದಾದ ಬಳಿಕ ಚೀನಾದ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳು ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದವು. ಕೃತಕ ಉಪಗ್ರಹಗಳನ್ನು ನಿಯಂತ್ರಿಸುವ ಚೀನಾದ ಚಾಂಗ್ಗುವಾಂಗ್ ಉಪಗ್ರಹ ತಂತ್ರಜ್ಞಾನ ಪದವಿ ವಿದ್ಯಾರ್ಥಿಗಳ ಫೋಟೋವನ್ನು ಕ್ಲಿಕ್ಕಿಸಿಕೊಡ್ತಿರೋದು ಸಮಸ್ಯೆಯಾಗುವಂತಹ ವಿಚಾರವೇನಲ್ಲ. ಇದರ ಜೊತೆಯಲ್ಲಿ ಸಿಜಿಎಸ್ಟಿಸಿ ಚೀನಾದ ಮೊದಲ ವಾಣಿಜ್ಯ ಉಪಗ್ರಹ ಪುಂಜ ಸ್ಥಾಪನೆಗೆ ಮುಂದಾಗಿದೆ.
ಚಾಂಗ್ಗುವಾಂಗ್ ಉಪಗ್ರಹ ತಂತ್ರಜ್ಞಾನವು ಈ ಕೃತಕ ಉಪಗ್ರಹ ಪುಂಜವನ್ನು 2030ರ ಒಳಗಾಗಿ ಸ್ಥಾಪನೆ ಮಾಡುವ ಗುರಿ ಹೊಂದಿದೆ. ಇದರಲ್ಲಿ ಬರುವ ಜಿಲಿನ್ 1 ಉಪಗ್ರಹ ಪುಂಜವು ಎಷ್ಟರ ಮಟ್ಟಿಗೆ ರಿಮೋಟ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ ಎಂದರೆ ಪ್ರತಿ 10 ನಿಮಿಷಕ್ಕೆ ಭೂಮಿಯ ಪ್ರತಿಯೊಂದು ಇಂಚುಗಳ ಮೇಲೆಯೂ ನಿಗಾ ಇಡಲಿದೆ. ಈ ಮೂಲಕ ಸ್ಮಾರ್ಟ್ ಸಿಟಿ, ಅರಣ್ಯ ಪ್ರದೇಶ, ಕೃಷಿ ಭೂಮಿ ಹೀಗೆ ಪ್ರತಿಯೊಂದು ಸ್ಥಳಗಳ ಮೇಲೂ ಚೀನಾ ಕಣ್ಣು ಇರಲಿದೆ.
ಕೊರೊನಾ ನಂತ್ರ ಕಾಡ್ತಿದೆ ಈ ಅಪಾಯಕಾರಿ ಸಮಸ್ಯೆ
ಸೆಪ್ಟೆಂಬರ್ 2020ರಲ್ಲಿ ಜಿಲಿನ್ 1 ಉಪಗ್ರಹಗಳನ್ನು ಹಳದಿ ಸಮುದ್ರದ ವೇದಿಕೆಯಿಂದ ಒಂದೇ ಬಾರಿಗೆ ಉಡಾವಣೆ ಮಾಡಲಾಗಿತ್ತು. ಈ ಮೂಲಕ ಚೀನಾ ಮೊದಲ ಬಾರಿಗೆ ಸಮುದ್ರದಿಂದ ಉಪಗ್ರಹಗಳನ್ನು ಉಡಾವಣೆ ಮಾಡಿ ತೋರಿಸಿತು. ಜಿಲಿನ್ 1 ಹಗುರವಾದ ರಚನಾತ್ಮಕ ವಿನ್ಯಾಸ ಹೊಂದಿದ್ದು ಹೆಚ್ಚಿನ ರೆಸೆಲ್ಯೂಷನ್ನ್ನ ಕ್ಯಾಮರಾ ಹೊಂದಿದೆ. ಪ್ರತಿಯೊಂದು ಉಪಗ್ರಹಗಳ ತೂಕ 40 ಕೆಜಿ ಇದೆ ಎನ್ನಲಾಗಿದೆ.
ಸಿಜಿಎಸ್ಟಿಸಿ ನೀಡಿರುವ ಮಾಹಿತಿಯ ಪ್ರಕಾರ 2021ರ ಅಂತ್ಯದ ವೇಳೆಗೆ ಬಾಹ್ಯಾಕಾಶದಲ್ಲಿ 60 ಜಿಲಿನ್ ಉಪಗ್ರಹ ಇರಲಿದೆ ಎಂದು ಹೇಳಿದೆ. ಕೇವಲ ಮೂರು ತಿಂಗಳಲ್ಲಿ ಸಿಜಿಎಸ್ಟಿಸಿ ಹೆಚ್ಚುವರಿ 29 ಜಿಲಿನ್ ಉಪಗ್ರಹಗಳನ್ನು ಕಳುಹಿಸಿದೆ. 2030ರ ಅಂತ್ಯದ ವೇಳೆಗೆ ಉಳಿದ 78 ಉಪಗ್ರಹಗಳು ಬಾಹ್ಯಾಕಾಶವನ್ನು ಸೇರಲಿವೆ. ಈ ಮೂಲಕ ಪ್ರತಿ 10 ನಿಮಿಷಕ್ಕೆ ಹಗಲು ಇರುಳೆನ್ನದೇ ಭೂಮಿಯ ಇಂಚಿಂಚೂ ಜಾಗದ ಮೇಲೂ ಕಣ್ಣಿಡಲಿವೆ.