alex Certify ಅಮೆರಿಕಾದಲ್ಲಿ ಮಕ್ಕಳನ್ನು ಬಿಟ್ಟು ಬಂದಿದ್ದ ನಟಿಗೆ 338 ಕೋಟಿ ದಂಡ ವಿಧಿಸಿದ ಚೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದಲ್ಲಿ ಮಕ್ಕಳನ್ನು ಬಿಟ್ಟು ಬಂದಿದ್ದ ನಟಿಗೆ 338 ಕೋಟಿ ದಂಡ ವಿಧಿಸಿದ ಚೀನಾ

Chinese actress zheng shuang fined rs 338 crore Over tax evasion | चीनी  एक्ट्रेस Zheng Shuang के खिलाफ जिनपिंग सरकार का एक्शन, बच्चे 'पैदा' कर छोड़  आई थी US । Hindi News,

ಚೀನಾ ಸರ್ಕಾರ, ಆದಾಯ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡ್ತಿದೆ. ಸೆಲೆಬ್ರಿಟಿಗಳ ಮೇಲ್ವಿಚಾರಣೆ ನಡೆಯುತ್ತಿದೆ. ತೆರಿಗೆ ವಂಚನೆ ಮಾಡಿದ್ದ ಚೀನಾದ ಖ್ಯಾತ ನಟಿ ಜೆಂಗ್ ಶುವಾಂಗ್ ಗೆ ತೆರಿಗೆ ಇಲಾಖೆ ದಂಡ ವಿಧಿಸಿದೆ. ಜೆಂಗ್ ಶುವಾಂಗ್‌ಗೆ 338 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ಚೀನಾದ ಹೊಸ ನೀತಿ, ಸೆಲೆಬ್ರಿಟಿಗಳಿಗೆ ಮುಳುವಾಗಿದೆ. ಚೀನಾದಲ್ಲಿ ಆದಾಯದ ಅಸಮಾನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ನಿಖರವಾದ ತೆರಿಗೆ ಮಾಹಿತಿಯನ್ನು ನೀಡದ ಕಾರಣ ನಟಿಗೆ ಆದಾಯ ತೆರಿಗೆ ಇಲಾಖೆ ದಂಡ ವಿಧಿಸಿದೆ. ನಟಿ 2019 ಮತ್ತು 2020 ರ ನಡುವೆ ಟಿವಿ ಸರಣಿಯ ಚಿತ್ರೀಕರಣದ ಸಮಯದಲ್ಲಿ ಆದಾಯದ ಬಗ್ಗೆ ನಿಖರವಾದ ಮಾಹಿತಿ ನೀಡಿರಲಿಲ್ಲ. ತೆರಿಗೆ ವಂಚನೆ ಮಾಡಿದ್ದರು ಎನ್ನಲಾಗಿದೆ. ರಾಷ್ಟ್ರೀಯ ರೇಡಿಯೋ ಮತ್ತು ಟೆಲಿವಿಷನ್ ಆಡಳಿತವು, ಜೆಂಗ್ ಕೆಲಸ ಮಾಡಿದ ಎಲ್ಲಾ ಕಾರ್ಯಕ್ರಮಗಳನ್ನು ನಿಲ್ಲಿಸಬೇಕೆಂದು ಸೂಚಿಸಿದೆ.

ಬಾಡಿಗೆ ತಾಯ್ತನದ ಮೂಲಕ ತಾಯಿಯಾಗಿದ್ದ ಜೆಂಗ್, ಮಕ್ಕಳಿಬ್ಬರನ್ನು ಅಮೆರಿಕಾದಲ್ಲಿ ಬಿಟ್ಟಿದ್ದಾಳೆ ಎಂಬ ವಿಷ್ಯ ಈ ವರ್ಷದ ಆರಂಭದಲ್ಲಿ ಸಾರ್ವಜನಿಕ ಟೀಕೆಗೆ ಕಾರಣವಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...