ಬೀಜಿಂಗ್: ಚೀನಾದ ಆರ್ಥಿಕ ಕೇಂದ್ರವಾದ ಶಾಂಘೈನಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ದಾಖಲೆಯ ಮಟ್ಟವನ್ನು ತಲುಪಿರುವುದರಿಂದ, ನಾಳೆಯಿಂದ ಹಂತಹಂತವಾಗಿ ಲಾಕ್ ಡೌನ್ ಜಾರಿ ಮಾಡಲು ನಿರ್ಧರಿಸಲಾಗಿದೆ.
ಶಾಂಘೈ ನಗರದಲ್ಲಿ ಹೊಸ ಕೊರೋನಾ ವೈರಸ್ ಸೋಂಕು ಪ್ರಕರಣಗಳು ಒಂದೇ ದಿನದಲ್ಲಿ ಶೇ. 60 ಕ್ಕಿಂತ ಹೆಚ್ಚಿವೆ, ಹೆಚ್ಚಿದ ನಿರ್ಬಂಧಗಳ ನಡುವೆಯೂ ಸಹ ಸೋಂಕಿತರ ಸಂಖ್ಯೆ 1,600 ಕ್ಕೆ ಏರಿದೆ, ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳ ಪ್ರಕಾರ, ಮಾರ್ಚ್ 1 ರಿಂದ ದೇಶದಲ್ಲಿ 56,000 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.