
ದೂರದಲ್ಲಿರುವ ಇನಿಯ ಅಥವಾ ಪ್ರೇಯಸಿಯನ್ನ ಮಿಸ್ ಮಾಡ್ತಿರುವವರಿಗೆ ರಿಮೋಟ್ ಕಿಸ್ ಸಾಧನ ಬಂದಿದೆ. ಸಂಗಾತಿಯ ಚುಂಬನವನ್ನ ಅನುಭವಿಸಲು ಈ ರಿಮೋಟ್ ಕಿಸ್ ಸಾಧನ ಸಹಕಾರಿಯಾಗಿದೆ.
ಚೀನಾದ ಚಾನ್‌ಝೌ ವಿಶ್ವವಿದ್ಯಾನಿಲಯವು ‘ರಿಮೋಟ್ ಕಿಸ್’ ಸಾಧನವನ್ನು ಕಂಡುಹಿಡಿದಿದೆ. ಈ ಚುಂಬಿಸುವ ಸಾಧನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಿಮೋಟ್ ಕಿಸ್ ಸಾಧನವು ಬಳಕೆದಾರರ ತುಟಿಗಳ ಒತ್ತಡ, ಚಲನೆ ಮತ್ತು ತಾಪಮಾನವನ್ನು ಪುನರಾವರ್ತಿಸುತ್ತದೆ. ಇದರ ಬಳಕೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಸಾಧನವನ್ನು ಫೋನ್‌ನ ಚಾರ್ಜಿಂಗ್ ಪೋರ್ಟ್ ಗೆ ಪ್ಲಗ್ ಮಾಡಬೇಕಾಗುತ್ತದೆ. ಅಪ್ಲಿಕೇಷನ್ ನಲ್ಲಿ ತಮ್ಮ ಪಾಲುದಾರರೊಂದಿಗೆ ವೀಡಿಯೊ ಕರೆಯನ್ನು ಮಾಡಿ, ಅವರ ಚುಂಬನದ ಪ್ರತಿಕೃತಿಯನ್ನು ಪರಸ್ಪರ ರವಾನಿಸಬಹುದು.
ಆವಿಷ್ಕಾರಕ ಜಿಯಾಂಗ್ ಝೊಂಗ್ಲಿ ಅವರು ಚೀನಾದ ಸರ್ಕಾರಿ ಗ್ಲೋಬಲ್ ಟೈಮ್ಸ್ ಗೆ ಮಾಹಿತಿ ನೀಡಿ, ದೂರದಲ್ಲಿದ್ದ ತಮ್ಮ ಗೆಳತಿಯೊಂದಿಗೆ ಫೋನ್ ಮೂಲಕ ಮಾತ್ರ ಸಂಪರ್ಕ ಸಾಧಿಸುತ್ತಿದ್ದರು. ಹೀಗಾಗಿ ಅವರೊಂದಿಗೆ ಸಂಪರ್ಕ ಹೊಂದಲು ರಿಮೋಟ್ ಕಿಸ್ ಸಾಧನ ಕಂಡುಹಿಡಿಯಲು ಕಾರಣವಾಯಿತು ಎಂದು ಹೇಳಿದರು.
ಈ ಸಾಧನಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. 2016 ರಲ್ಲಿ, ಮಲೇಷ್ಯಾದ ಇಮ್ಯಾಜಿನರಿಂಗ್ ಇನ್‌ಸ್ಟಿಟ್ಯೂಟ್ ಟಚ್ ಸೆನ್ಸಿಟಿವ್ ಸಿಲಿಕಾನ್ ಪ್ಯಾಡ್‌ನ ರೂಪದಲ್ಲಿ ‘ಕಿಸ್ಸಿಂಜರ್’ ಎಂಬ ಹೆಸರಿನ ಇದೇ ರೀತಿಯ ಸಾಧನವನ್ನು ಬಿಡುಗಡೆ ಮಾಡಿದೆ.