ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 3 ನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ
ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಭಾನುವಾರ ಐದು ವರ್ಷಗಳ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಕ್ಷದ ಕಾಂಗ್ರೆಸ್ ಶನಿವಾರ ಮುಕ್ತಾಯಗೊಂಡಿದ್ದು, ಕ್ಸಿ ಜಿನ್‌ಪಿಂಗ್ ಪಕ್ಷದ ಮೇಲೆ ಬಿಗಿ ಹಿಡಿತವನ್ನು ಭದ್ರಪಡಿಸಿದ್ದಾರೆ.
69 ವರ್ಷದ ಕ್ಸಿ ಅವರು ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ನಂತರ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಧಿಕೃತ ನಿವೃತ್ತಿ ವಯಸ್ಸು 68 ದಾಟಿ 10 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದರೂ ಪ್ರಬಲ ಕೇಂದ್ರ ಸಮಿತಿಗೆ ಆಯ್ಕೆಯಾಗಿ ಹಿಡಿತ ಸಾಧಿಸಿದ್ದಾರೆ.
ಕೇಂದ್ರ ಸಮಿತಿಯ ಸದಸ್ಯರು 25 ಸದಸ್ಯರ ರಾಜಕೀಯ ಬ್ಯೂರೋವನ್ನು ಆಯ್ಕೆ ಮಾಡಿದರು, ಇದು ದೇಶವನ್ನು ಆಳಲು ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡುತ್ತದೆ.