alex Certify ಚಳಿಗಾಲದಲ್ಲೂ ಮುಂದುವರೆದ ಚೀನಾದ ಅಕ್ರಮ ನಿರ್ಮಾಣ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲೂ ಮುಂದುವರೆದ ಚೀನಾದ ಅಕ್ರಮ ನಿರ್ಮಾಣ ಕಾರ್ಯ

ಭಾರತ ಮತ್ತು ಚೀನಾದ ಗಡಿ ಗಲಾಟೆ ಇಂದು ನೆನ್ನೆಯದಲ್ಲ.‌ ಆದರೆ ಚೀನಾದ ಕೆಲ ನಡೆಗಳು ಉಭಯ ದೇಶಗಳ ನಡುವೆ ಉಲ್ಭಣ ಪರಿಸ್ಥಿತಿ ಸೃಷ್ಟಿಸುತ್ತವೆ ಎನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಪ್ಯಾಂಗಾಂಗ್ ಒಪ್ಪಂದದ ನಂತರ ಈಗ ಚೀನಾ ತನ್ನ ಗಡಿಯನ್ನ ಭದ್ರಗೊಳಿಸುವತ್ತ ಕಾರ್ಯೋನ್ಮುಖವಾಗಿದೆ.

60 ವರ್ಷಗಳಿಂದ ಅಕ್ರಮವಾಗಿ ವಶಪಡಿಸಿಕೊಂಡಿರುವ, ಭಾರತದ ಗಡಿ ರೇಖೆಯಲ್ಲಿ ಪಾಂಗಾಂಗ್ ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ದಡಗಳನ್ನು ಸಂಪರ್ಕಿಸುವ ಸೇತುವೆಯನ್ನ ನಿರ್ಮಾಣ ಮಾಡುತ್ತಿದೆ. ಇದಕ್ಕೆ ಪೂರಕವಾಗಿ, ನಿರ್ಮಾಣ ಹಂತದಲ್ಲಿರುವ ಸೇತುವೆಯ ಹೊಸ ಉಪಗ್ರಹ ಚಿತ್ರಗಳು ದೊರೆತಿದ್ದು, ಚಳಿಗಾಲದಲ್ಲೂ ನಿರ್ಮಾಣದ ವೇಗವು ಉತ್ತುಂಗಕ್ಕೇರಿದೆ ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಬಾಹ್ಯಾಕಾಶ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಭಾರತಕ್ಕೆ ಒದಗಿಸಿದ ಚಿತ್ರಗಳನ್ನ ವಿಶ್ಲೇಷಿಸಿದಾಗ, ಈ ವಿಷಯ ಬೆಳಕಿಗೆ ಬಂದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸರೋವರದ ಉತ್ತರ ತೀರದಿಂದ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಅದರ ಪೂರ್ಣಗೊಳ್ಳುವಿಕೆಯು ದಕ್ಷಿಣ ದಂಡೆಯಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿದೆ. ಚೀನಾವು ಚಳಿಗಾಲದಲ್ಲಿಯೂ ಸಹ ಗಡಿ ಪ್ರದೇಶಗಳಿಗೆ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಬಲಪಡಿಸುತ್ತಿದೆ. ಗಾಲ್ವಾನ್ ಬಳಿಯೂ ಇದೇ ರೀತಿಯ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣದ ಘಟನೆಗಳು ವರದಿಯಾಗಿವೆ.

ಲಭ್ಯವಿರುವ ಚಿತ್ರಗಳ ಪ್ರಕಾರ ನಿರ್ಮಾಣ ಹಂತದಲ್ಲಿರುವ ಸೇತುವೆಯು ಸರಿಸುಮಾರು 315 ಮೀಟರ್ ಉದ್ದವಿದೆ ಎಂದು ಅಂದಾಜಿಸಲಾಗಿದೆ. ಈ ಸೇತುವೆ ಸರೋವರದ ದಕ್ಷಿಣ ತುದಿಯನ್ನು ಉತ್ತರದಲ್ಲಿ ಹೊಸದಾಗಿ ನಿರ್ಮಿಸಲಾದ ರಸ್ತೆಗೆ ಸಂಪರ್ಕಿಸುತ್ತದೆ. ನಿರ್ಮಾಣ ಸ್ಥಳದಲ್ಲಿ ಭಾರೀ ಯಂತ್ರೋಪಕರಣಗಳನ್ನು ಕಾಣಬಹುದು. ಈ ಹಿಂದೆ ಭಾರತ ಸರ್ಕಾರವು ಚೀನಾದ ಗಡಿ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ. ಈ ಸೇತುವೆಯನ್ನು ಸುಮಾರು 60 ವರ್ಷಗಳಿಂದ ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿದೆ ಎಂಬುದು ಗಮನಾರ್ಹ.

ಆದರೆ ಭಾರತವು ಅಕ್ರಮ ನಿರ್ಮಾಣಗಳನ್ನು ಎಂದಿಗೂ ಒಪ್ಪಿಕೊಂಡಿಲ್ಲ, ಒಪ್ಪಿಕೊಳ್ಳುವುದಿಲ್ಲ ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಈ ತಿಂಗಳ ಆರಂಭದಲ್ಲಿ ಹೇಳಿದ್ದಾರೆ. ಈ ಸಮಯದಲ್ಲಿ ಸಂಪೂರ್ಣ ಪ್ಯಾಂಗೊಂಗ್ ಸರೋವರವು ಅರೆ-ಹೆಪ್ಪುಗಟ್ಟಿದ ಸ್ಥಿತಿಯಲ್ಲಿದ್ದರೆ, ನಿರ್ಮಾಣ ಸ್ಥಳದ ಸಮೀಪವಿರುವ ಪ್ರದೇಶಗಳು ಸರೋವರದ ಪಶ್ಚಿಮ ಭಾಗಕ್ಕಿಂತ ಹೆಚ್ಚು ಘನವಾದ ಮಂಜುಗಡ್ಡೆಯನ್ನು ಸಂಗ್ರಹಿಸಿದಂತೆ ಕಾಣಿಸುತ್ತಿದೆ. ಆದರೂ ಚೀನಾದ ಸೇತುವೆ ನಿರ್ಮಾಣ ಕಾರ್ಯ ಮುಂದುವರೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...