ಚೀನಾದ ಖ್ಯಾತ ಅಲೆಮಾರಿ ಆನೆಗಳ ಹಿಂಡು ತಮ್ಮ ಸಂಚಾರವನ್ನು ಮುಂದುವರೆಸಿದ್ದು, ಸದ್ಯ ನೈಋತ್ಯ ದಿಕ್ಕಿನೆಡೆಗೆ ಸಾಗುತ್ತಿದ್ದರೆ, ಗುಂಪಿನಿಂದ ಪ್ರತ್ಯೇಕಗೊಂಡಿರುವ ಸಲಗವೊಂದು ಹಾಗೇ ಅಂತರ ಕಾಯ್ದುಕೊಂಡಿದೆ.
ವರ್ಷದ ಹಿಂದೆ ಯುನ್ನಾನ್ ಪ್ರಾಂತ್ಯದ ನೈಋತ್ಯದಲ್ಲಿರುವ ವನ್ಯಧಾಮವೊಂದರಿಂದ ಹೊರ ಬಂದ ಈ ಆನೆಗಳು, ಅಂದಿನಿಂದ ಇಲ್ಲಿವರೆಗೂ 500 ಕಿಮೀ ಸಾಗಿಬಂದು, ಪ್ರಾಂತೀಯ ರಾಜಧಾನಿ ಕುನ್ಮಿಂಗ್‌ನ ಹೊರವಲಯದಲ್ಲಿ ಕಾಣಿಸಿಕೊಂಡಿದ್ದವು.
ಮೂರೇ ವಾರಗಳಲ್ಲಿ ನಿರ್ಮಾಣವಾಗುತ್ತೆ ಪೋರ್ಟಬಲ್ ಆಸ್ಪತ್ರೆ…!
ಶನಿವಾರದಂದು ಈ ಆನೆಗಳನ್ನು ಯುಕ್ಸಿ ನಗರದ ಶಿಜೆ ಟೌನ್‌ಶಿಪ್ ಬಳಿ ನೋಡಲಾಗಿದೆ. ಕಳೆದ ವಾರ ಇಲ್ಲಿಂದ 8 ಕಿಮೀ ದೂರದಲ್ಲಿರುವ ಕುನ್ಮಿಂಗ್ ನಗರದ ಹೊರವಲಯಕ್ಕೆ ಈ ಆನೆಗಳು ಆಗಮಿಸಿದ್ದವು. ಏಕೈಕವಾಗಿ ಅಡ್ಡಾಡುತ್ತಿರುವ ಒಂಟಿ ಸಲಗ ಈ ಹಿಂಡಿನಿಂದ 16 ಕಿಮೀ ದೂರದಲ್ಲಿದೆ.
250 ಮಿಲಿಯನ್ ವೀಕ್ಷಣೆ ಸಮೀಪದಲ್ಲಿ ‘ಪೊಗರು’ ಚಿತ್ರದ ಖರಾಬು ಹಾಡು
ಸದ್ಯ ಈ ಆನೆಗಳು ಸಾಗುತ್ತಿರುವ ದಿಕ್ಕು ನೋಡಿದರೆ ಅವುಗಳು ತಮ್ಮ ಟೂರ್ ಮುಗಿಸಿಕೊಂಡು ಮರಳಿ ಮನೆಗೆ ಧಾವಿಸುವ ಸಾಧ್ಯತೆಗಳು ಕಾಣುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುನ್ಮಿಂಗ್‌ನ ನೈಋತ್ಯಕ್ಕಿರುವ ಶಿಶುವಾಂಗ್‌ಬನ್ನಾ ಡಾಯ್ ಸ್ವಾಯತ್ವ ಪ್ರದೇಶದಲ್ಲಿ ಈ ಆನೆಗಳ ವನ್ಯಧಾಮ ಇದೆ.