ಬೀಜಿಂಗ್: ಚೀನಾ ವಿದೇಶಾಂಗ ಸಚಿವ ಸ್ಥಾನದಿಂದ ಖಿನ್ ಗಾಂಗ್ ದಿಢೀರ್ ಪದಚ್ಯುತಿಗೊಳಿಸಿರುವುದರ ಹಿಂದೆ ಅಕ್ರಮ ಸಂಬಂಧ ಕಾರಣವೆಂದು ಹೇಳಲಾಗಿದೆ.
ಅಮೆರಿಕ ರಾಯಭಾರಿಯಾಗಿದ್ದ ಸಂದರ್ಭದಲ್ಲಿ ಖಿನ್ ಗಾಂಗ್ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದರು. ಮಗುವಿಗೆ ತಂದೆಯಾಗಿದ್ದರು. ಇದೇ ಕಾರಣದಿಂದ ಅವರನ್ನು ವಿದೇಶಾಂಗ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಈ ಕುರಿತು ವರದಿ ಬಿಡುಗಡೆ ಮಾಡಿದ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.
ಖೀನ್ ಗಾಂಗ್ ಅಮೆರಿಕ ರಾಯಭಾರಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯೊಂದಿಗೆ ಸಂಬಂಧ ಬೆಳೆಸಿ ಮಗುವಿಗೆ ತಂದೆಯಾಗಿದ್ದರು. ಚೀನಾ ತತ್ವಕ್ಕೆ ವಿರುದ್ಧವಾದ ಬೇಸ್ ಬಾಲ್ ಕ್ರೀಡೆಯಲ್ಲಿ ಭಾಗವಹಿಸಿದ್ದರು. ಎಲಾನ್ ಮಸ್ಕ್ ಜೊತೆ ಟೆಸ್ಲಾ ಕಾರ್ ನಲ್ಲಿ ಪ್ರಯಾಣಿಸಿದ್ದರು. ಚೀನಾ ಭದ್ರತೆಯನ್ನು ಕಡೆಗಣಿಸಿದ್ದರು. ಇವೆಲ್ಲ ಕಾರಣದಿಂದ ಅವರನ್ನು ವಿದೇಶಾಂಗ ಸಚಿವ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ.