ಅಮರನಾಥ ಯಾತ್ರೆಗೆ ಸಾಗುವ ಮಾರ್ಗದಲ್ಲಿ ಪ್ರತಿಕೂಲ ಹವಾಮಾನದ ಕಾರಣಕ್ಕೆ ಶಿಥಿಲಗೊಂಡಿದ್ದ ಸೇತುವೆಯೊಂದನ್ನು ಭಾರತೀಯ ಯೋಧರ ಚಿನಾರ್ ಕಾರ್ಪ್ಸ್ ತಂಡವು ದಾಖಲೆ ಅವಧಿಯಲ್ಲಿ ನಿರ್ಮಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಿಢೀರ್ ಭೂ ಕುಸಿತದ ಕಾರಣಕ್ಕೆ ಈ ಸೇತುವೆಗಳು ಕೊಚ್ಚಿ ಹೋಗಿದ್ದು, ಇದರಿಂದಾಗಿ ಜೂನ್ 30 ರಿಂದ ಆರಂಭವಾಗಿರುವ ಅಮರನಾಥ ಯಾತ್ರಿಗಳು ಬಳಸಿಕೊಂಡು ಸಾಗಬೇಕಾಗಿತ್ತು. ಹೀಗಾಗಿ ಹೆಚ್ಚುವರಿ ನಾಲ್ಕು ಗಂಟೆಗಳ ಸಮಯ ತಗುಲುತ್ತಿತ್ತು.
ಜಿಲ್ಲಾಡಳಿತ ಸಹಕಾರದೊಂದಿಗೆ ಚಿನಾರ್ ಕಾರ್ಪ್ಸ್ ಸೈನಿಕರು ಈ ಸೇತುವೆ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಹೆಲಿಕಾಪ್ಟರ್ ಮೂಲಕವೂ ತರಿಸಿಕೊಳ್ಳಲಾಗಿತ್ತು. ಭಾರತೀಯ ಯೋಧರು ಪ್ರತಿಕೂಲ ಹವಾಮಾನದ ಮಧ್ಯೆಯೂ ನಿರಂತರವಾಗಿ ಕಾರ್ಯ ನಿರ್ವಹಿಸಿ ಈ ಸೇತುವೆ ರೂಪಿಸಿದ್ದಾರೆ.