alex Certify ಕೊರೊನಾ ನಿಯಂತ್ರಣಕ್ಕೆ ಚೀನಾ ಸರ್ಕಾರ ಮಾಡಿದ ಹೊಸ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಿಯಂತ್ರಣಕ್ಕೆ ಚೀನಾ ಸರ್ಕಾರ ಮಾಡಿದ ಹೊಸ ಪ್ಲಾನ್

ವಿಶ್ವದಾದ್ಯಂತ ದೊಡ್ಡ ಆಪತ್ತು ತಂದಿಟ್ಟ ಕೊರೊನಾ ಮೊದಲು ಹರಡಿದ್ದು ಚೀನಾದಲ್ಲಿ. ಆರಂಭದಲ್ಲಿ ಚೀನಾದಲ್ಲಿಯೇ ಕೊರೊನಾ ಕಾಣಿಸಿಕೊಂಡರೂ ಚೀನಾ ಸೋಂಕಿತರ ಸರಿಯಾದ ಅಂಕಿಅಂಶ ನೀಡಿಲ್ಲ. ಈಗ ದೇಶ ವೈರಸ್ ನಿಂದ ಮುಕ್ತವಾಗಿದೆ ಎಂದು ಅಲ್ಲಿನ ಸರ್ಕಾರ ಹೇಳ್ತಿದೆ. ಈ ಮಧ್ಯೆ ಕೊರೊನಾ ನಿಯಂತ್ರಣಕ್ಕೆ ಚೀನಾ ಹೊಸ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ.

ಜನರ ಮುಖ ನೋಡಿ ಕೊರೊನಾ ಸೋಂಕಿತರನ್ನು ಪತ್ತೆ ಮಾಡುವ ತಂತ್ರಜ್ಞಾನವನ್ನು ಚೀನಾ ಬಳಸುತ್ತಿದೆ. ಬೇಹುಗಾರಿಕೆ ಮತ್ತು ಸೈಬರ್ ಭದ್ರತೆಯ ಹೆಸರಿನಲ್ಲಿ ಚೀನಾ ಈಗಾಗಲೇ ತನ್ನ ನಾಗರಿಕರ ಮೇಲೆ ನಿಗಾ ಇಟ್ಟಿದೆ. ಕಳೆದ ಕೆಲ ವರ್ಷಗಳಿಂದ ಚೀನಾ ದೇಶದ ಅನೇಕ ಭಾಗಗಳಲ್ಲಿ ಕ್ಯಾಮರಾ ಅಳವಡಿಸಿದೆ. 200 ದಶಲಕ್ಷಕ್ಕೂ ಹೆಚ್ಚು ಕ್ಯಾಮರಾ ಅಳವಡಿಸಲಾಗಿದೆ. ಕೊರೊನಾ ಪರೀಕ್ಷೆಯ ಫಲಿತಾಂಶಗಳನ್ನು ಕ್ಯೂಆರ್ ಕೋಡ್ ಸಿಸ್ಟಮ್ ಮೂಲಕ ನೀಡಿ, ಸೋಂಕಿತರನ್ನು ಪತ್ತೆ ಮಾಡಲಾಗ್ತಿದೆ.

ಈಗ Facial Recognition ತಂತ್ರಜ್ಞಾನದ ಮೂಲಕ ಕೊರೊನಾ ಸೋಂಕಿತರ ಪತ್ತೆ ಮಾಡಲಿದೆ. ಇದ್ರ ಮೂಲಕ ಜನರ ಆರೋಗ್ಯ, ಚಲನೆ ಬಗ್ಗೆ ಗಮನ ನೀಡಲಾಗುವುದು. ಸಾರ್ವಜನಿಕ ಪ್ರದೇಶ, ಮಾಲ್ ಗಳಲ್ಲಿ ಕ್ಯಾಮರಾ ಅಳವಡಿಸಲಾಗುವುದು. ಅಲ್ಲಿಗೆ ಬರುವ ಪ್ರತಿಯೊಬ್ಬರೂ ಮುಖವನ್ನು ಸ್ಕ್ಯಾನ್ ಮಾಡಬೇಕು. ಸದ್ಯ ಮ್ಯಾನ್ಮಾರ್ ಗಡಿಯ ರುಯ್ಲಿಯಲ್ಲಿ ಇದನ್ನು ಶುರು ಮಾಡಲಾಗಿದೆ. ಸ್ಕ್ಯಾನರ್ ಗಳು ದೇಹದ ಉಷ್ಣತೆಯನ್ನು ಪರಿಶೀಲಿಸುತ್ತವೆ. ಆದ್ರೆ ಇದು ಜನರ ಗೌಪ್ಯತೆಗೆ ಅಡ್ಡಿಯುಂಟು ಮಾಡ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...