ಹೊಸ ವರ್ಷದ ದಿನದಂದೇ, ಚೀನಾ ಭಾರತವನ್ನ ಮತ್ತೆ ಕೆಣಕಿದೆ. ಜನವರಿ 1 ರಂದು ಗಲ್ವಾನ್ ಕಣಿವೆಯಲ್ಲಿ ತನ್ನ ರಾಷ್ಟ್ರಧ್ವಜವನ್ನು ಹಾರಿಸಿ, ಗಲ್ವಾನ್ ಗಡಿ ನಮ್ಮದು ಎಂದು ಹೇಳಿದೆ. ಈ ಕಾರ್ಯಕ್ರಮದ ವಿಡಿಯೊಗಳನ್ನು ಚೀನೀ ಸರ್ಕಾರದ ಮಾಧ್ಯಮಗಳು ಹಂಚಿಕೊಂಡಿವೆ.
ಗಲ್ವಾನ್ ಕಣಿವೆಯಲ್ಲಿ ಭಾರತಕ್ಕೆ ಒಂದಿಂಚು ಭೂಮಿ ನೀಡುವುದಿಲ್ಲ. PLA ಸೈನಿಕರಿಂದ ಚೀನಾದ ಜನರಿಗೆ ಹೊಸ ವರ್ಷದ ಶುಭಾಶಯಗಳು ಎಂದು ಗ್ಲೋಬಲ್ ಟೈಮ್ಸ್ ಎನ್ನುವ ಚೈನಾದ ಸರ್ಕಾರಿ ಮಾಧ್ಯಮ ಟ್ವೀಟ್ ಮಾಡಿದೆ.
ಚೀನಾದ ಮಾಧ್ಯಮ ಪ್ರತಿನಿಧಿ ಶೆನ್ ಶಿವೇಯ್, 2022 ರ ಹೊಸ ವರ್ಷದ ದಿನದಂದು ಗಲ್ವಾನ್ ಕಣಿವೆಯ ಮೇಲೆ ಚೀನಾದ ರಾಷ್ಟ್ರೀಯ ಧ್ವಜ ಏರಿದೆ. ಈ ರಾಷ್ಟ್ರಧ್ವಜವು ಬೀಜಿಂಗ್‌ನ ಟಿಯಾನನ್‌ಮೆನ್ ಸ್ಕ್ವೇರ್‌ನಲ್ಲಿ ಒಮ್ಮೆ ಹಾರಿದ್ದು ಇದರ ವಿಶೇಷತೆ ಎಂದು ಟ್ವೀಟ್ ಮಾಡಿದ್ದಾರೆ.
ಫುಟ್ಬಾಲ್ ಆಟಗಾರರಿಗೆ ಟ್ಯಾಟೂ ನಿಷೇಧ ಮಾಡಿ ಆದೇಶ ಹೊರಡಿಸಿದ ಬೋರ್ಡ್…..!
ಈ ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಸರ್ಕಾರವನ್ನ ಪ್ರಶ್ನಿಸಿದ್ದಾರೆ. ಗಲ್ವಾನ್‌ನಲ್ಲಿ ಚೀನಾದ ಅತಿಕ್ರಮಣಗಳ ಕುರಿತು ಮೌನ ಮುರಿಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರನ್ನ ಟೀಕಿಸಿದ್ದಾರೆ. ನಮ್ಮ ತ್ರಿವರ್ಣ ಧ್ವಜವು ಗಲ್ವಾನ್ ನಲ್ಲಿ ಹಾರಬೇಕು, ಚೀನಾ ದೇಶಕ್ಕೆ ನಾವು ಪ್ರತಿಕ್ರಿಯೆ ನೀಡಬೇಕು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ಭಾರತಕ್ಕೆ ಚೀನಾ ಸವಾಲೆಸೆದಿದೆ. ಆದರೆ ಮರುನಾಮಕರಣದ ಬಗ್ಗೆ ಸರ್ಕಾರ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿತ್ತು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಛರಿಸಿತ್ತು.
ಆದರೆ ಈ ಘಟನೆ ಬಗ್ಗೆ ಇದುವರೆಗು ಸರ್ಕಾರದಿಂದಾಗಲಿ ಸರ್ಕಾರದ ಪ್ರತಿನಿಧಿಗಳಿಂದಾಗಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಾಗಾಗಿ ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರವನ್ನ ಪ್ರಶ್ನೆ ಮಾಡುತ್ತಿದ್ದಾರೆ.