ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಬೀಜಿಂಗ್ ಒಲಂಪಿಕ್ ಗೆ ಮುನ್ನ ಚೈನಾದಲ್ಲಿ ಕೋವಿಡ್ ಸಾಂಕ್ರಾಮಿಕ ಹರಡುವ ಆತಂಕ ಚೈನಾದಲ್ಲಿ ಕಾಣಿಸಿದೆ.
ಹಠಾತ್ ಏರಿಕೆ ಎಂಬಂತೆ 206 ಹೊಸ ಪ್ರಕರಣಗಳನ್ನು ಚೀನಾ ವರದಿ ಮಾಡಿದೆ. ಕರೋನ ವೈರಸ್‌ನ ಹೊಸ ಪ್ರಕರಣಗಳಲ್ಲಿ, ಶಾಂಕ್ಸಿಯಲ್ಲಿ 157 ಮತ್ತು ಗುವಾಂಗ್ಕ್ಸಿ ಪ್ರಾಂತ್ಯಗಳಲ್ಲಿ ಒಂದು ಪ್ರಕರಣ ವರದಿಯಾಗಿದೆ. ಜೊತೆಗೆ 48 ಹೊರಗಿನಿಂದ ಬಂದವರಲ್ಲಿ ಪ್ರಕರಣಗಳು ಕಾಣಿಸಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ವಿವರಿಸಿದೆ.
ಬೀಜಿಂಗ್ ವಿಂಟರ್ ಒಲಿಂಪಿಕ್ಸ್‌ಗೆ ಇನ್ನು ಕೆಲವು ದಿನಗಳು ಬಾಕಿ ಇರುವಾಗ ಪ್ರಕರಣಗಳ ಹೆಚ್ಚಳವು ಆ ದೇಶದಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಲು ಪರದಾಟ ನಡೆಸಿದ್ದಾರೆ.
ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ
ಅಂತರರಾಷ್ಟ್ರೀಯ ಪ್ರಯಾಣವನ್ನು ನಿಯಂತ್ರಿಸಿದ್ದ ಚೈನಾ ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸಿದ್ದರೂ, ದೇಶದ ವಿವಿಧ ಭಾಗಗಳಲ್ಲಿ ವಿರಳವಾದ ಪ್ರಕರಣಗಳ ಕ್ಲಸ್ಟರ್ ಕಾಣಿಸಿಕೊಳ್ಳುತ್ತಲೇ ಇದೆ.
ಡಿಸೆಂಬರ್ 13 ರಂದು ಚೈನಾದ ಟಿಯಾಂಜಿನ್ ನಗರದಲ್ಲಿ ಒಮಿಕ್ರಾನ್ ಪ್ರಕರಣವನ್ನು ವರದಿ ಮಾಡಿದ್ದರು, ನಂತರ ಮತ್ತಷ್ಟು ಅಂತಹದ್ದೇ ಕೆಲವು ಪ್ರಕರಣಗಳು ವರದಿಯಾಗಿವೆ. ಇದು ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಬಗ್ಗೆ ಮಾಹಿತಿಯಿಲ್ಲ.
ಸ್ಥಳೀಯ ಕೋವಿಡ್ ಸೋಂಕು ಹರಡುವಿಕೆ ಮತ್ತು ಹೊರಗಿನಿಂದ ಬರುತ್ತಿರುವ ಓಮಿಕ್ರಾನ್ ರೂಪಾಂತರದಿಂದ ಅಪಾಯ ಎದುರಿಸುತ್ತಿರುವ ಬೀಜಿಂಗ್ ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸಿದೆ.
ಚೀನೀ ಹೊಸ ವರ್ಷ ಮತ್ತು ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಸಮೀಪಿಸುತ್ತಿರುವಂತೆ ಶೂನ್ಯ ಕೋವಿಡ್ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಚೈನಾ ಆಡಳಿತ ಪ್ರತಿಜ್ಞೆ ಮಾಡಿದೆ ಎಂದು ಅಲ್ಲಿನ ಆಡಳಿತ ವರದಿ ಮಾಡಿದೆ.
ಬೀಜಿಂಗ್‌ನಲ್ಲಿ ಸ್ಥಳೀಯವಾಗಿ ಹರಡುವ ಸೋಂಕುಗಳ ಪ್ರಕರಣಗಳಿಗೆ ಅನ್ವಯಿಸುವಂತೆ ಹೊಸ ನಿಯಮ ಜಾರಿ ಮಾಡಿದೆ. ಅಗತ್ಯ ಕಾರಣಗಳನ್ನು ಹೊರತುಪಡಿಸಿ ರಾಜಧಾನಿಯಿಂದ ನಿರ್ಗಮಿಸುವುದನ್ನು ನಿರ್ಬಂಧಿಸಲಾಗಿದೆ.